ಕಿಯೋನಿಕ್ಸ್ ಅಧ್ಯಕ್ಷರಾಗಿ ಶರತ್ ಬಚ್ಚೇಗೌಡ​ ಆಯ್ಕೆ; 3.5 ಟನ್​ ಮಟನ್, 2.5 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2024 | 3:28 PM

ಕಿಯೋನಿಕ್ಸ್ ಅಧ್ಯಕ್ಷರಾಗಿ ಶಾಸಕ ಶರತ್ ಬಚ್ಚೇಗೌಡ(Sharath Bache Gowda) ಆಯ್ಕೆಯಾದ ಹೊಸಕೋಟೆ(Hosakote) ನಗರದ ಸೈಯದ್ ಪ್ಯಾಲೆಸ್​ನಲ್ಲಿ 3.5 ಟನ್ ಮಟನ್ ಮತ್ತು 2.5 ಟನ್ ಚಿಕನ್ ಬಳಸಿ ಮುದ್ದೆ, ಚಿಕನ್ ಪ್ರೈ, ಮಟನ್ ಬಿರಿಯಾನಿ, ಮಟನ್ ಸಾಂಬಾರ್, ಮೊಟ್ಟೆ, ಇಡ್ಲಿ, ಅನ್ನ-ರಸಂ ಮತ್ತು ಮಜ್ಜಿಗೆ ಸೇರಿ ಭರ್ಜರಿ ಬಾಡೂಟ ವ್ಯವಸ್ಥೆ ಮಡಲಾಗಿತ್ತು.

ಬೆಂಗಳೂರು ಗ್ರಾಮಾಂತರ, ಫೆ.25: ಶಾಸಕ ಶರತ್ ಬಚ್ಚೇಗೌಡ(Sharath Bache Gowda) ಕಿಯೋನಿಕ್ಸ್ (Keonics)  ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಇಂದು (ಫೆ.25) ಕ್ಷೇತ್ರದ ಕಾರ್ಯಕರ್ತರಿಗೆ ಹೊಸಕೋಟೆ(Hosakote) ನಗರದ ಸೈಯದ್ ಪ್ಯಾಲೆಸ್​ನಲ್ಲಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಈ ಬಾಡೂಟದ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದು, ಮುಖಂಡರು ಕಾರ್ಯಕರ್ತರನ್ನೆಲ್ಲ ಒಂದೆಡೆ ಸೇರಿಸಿ 3.5 ಟನ್ ಮಟನ್ ಮತ್ತು 2.5 ಟನ್ ಚಿಕನ್ ಬಳಸಿ ಮುದ್ದೆ, ಚಿಕನ್ ಪ್ರೈ, ಮಟನ್ ಬಿರಿಯಾನಿ, ಮಟನ್ ಸಾಂಬಾರ್, ಮೊಟ್ಟೆ, ಇಡ್ಲಿ, ಅನ್ನ-ರಸಂ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಭರ್ಜರಿ ಬಾಡೂಟ ಸವಿಯಲು ಸಾವಿರಾರು ಜನ ಕಾರ್ಯಕರ್ತರು ಆಗಮಿಸಿದ್ದು, ಭರ್ಜರಿ ಬಾಡೂಟ ಸವಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ