ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸ್: ರಾಜಿಗೆ ಯತ್ನಿಸಿದ್ದನಾ ರಾಜೀವ್ ಗೌಡ?
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ಸುದ್ದಿಯಾಗುತ್ತಿದ್ದಂತೆ ರಾಜೀ ಸಂಧಾನದ ಯತ್ನ ನಡೆದಿರುವ ವಿಷಯ ಬಹಿರಂಗವಾಗಿದೆ. ನಮ್ಮ ತಂದೆಯವರಿಗೆ ರಾಜೀವ್ ಗೌಡ ಕಡೆಯಿಂದ ಕರೆ ಬಂದಿತ್ತಂತೆ ಎಂದು ಸ್ವತಃ ಅಮೃತಾ ಜಿ. ಅವರೇ ಟಿವಿ9ಗೆ ತಿಳಿಸಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಚಿಕ್ಕಬಳ್ಳಾಪುರ, ಜನವರಿ 16: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ಸುದ್ದಿಯಾಗುತ್ತಿದ್ದಂತೆ ರಾಜೀ ಸಂಧಾನದ ಯತ್ನ ನಡೆದಿರುವ ವಿಷಯ ಬಹಿರಂಗವಾಗಿದೆ. ಪೌರಾಯುಕ್ತೆ ಅಮೃತಾ ಅವರ ತಂದೆಗೆ ರಾಜೀವ್ ಗೌಡ ಕಡೆಯಿಂದ ಕರೆ ಬಂದಿತ್ತು ಎನ್ನಲಾಗಿದ್ದು, ಈ ಬಗ್ಗೆ ಸ್ವತಃ ಅಮೃತಾ ಅವರೇ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ನಾವು ನಿರ್ಧಾರ ಮಾಡಲು ಆಗಲ್ಲ. ಅದು ನಮ್ಮ ಮಗಳಿಗೆ ಸಂಬಂಧಿಸಿದ ವಿಷಯ ಎಂದು ಈ ವೇಳೆ ನಮ್ಮ ತಂದೆ ತಿಳಿಸಿದ್ದಾರೆ ಎಂದು ಟಿವಿ9ಗೆ ಪೌರಾಯುಕ್ತೆಯೇ ಮಾಹಿತಿ ನೀಡಿದ್ದಾರೆ. ಇನ್ನು ಘಟನೆ ಬಳಿಕ ಪೌರಾಯುಕ್ತೆ ಅಮೃತಾ ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಕರ್ತವ್ಯಗಳನ್ನು ಎಂದಿನಂತೆ ನಿರ್ವಹಿಸುತ್ತಿದ್ದಾರೆ. ಅಕ್ರಮವಾಗಿ ಅಳವಡಿಸಲಾದ ಫ್ಲೆಕ್ಸ್ ಬೋರ್ಡ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಸಿಬ್ಬಂದಿಯೊಂದಿಗೆ ಮುಂದುವರಿಸಿದ್ದಾರೆ. ಸಿಬ್ಬಂದಿ, ಸಾರ್ವಜನಿಕರು ಹಾಗೂ ಉನ್ನತ ಅಧಿಕಾರಿಗಳಿಂದಲೂ ಅಮೃತಾರಿಗೆ ಬೆಂಬಲ ವ್ಯಕ್ತವಾಗಿರೋದು ಇಲ್ಲಿ ಗಮನಾರ್ಹ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

