‘ದೇವರ ಮೇಲಿರೋ ಹೂ ಕೊಡಿ’; ತುಳುವಿನಲ್ಲಿ ಎಷ್ಟು ಮುದ್ದಾಗಿ ಕೇಳಿದ್ರು ನೋಡಿ ಶಿಲ್ಪಾ ಶೆಟ್ಟಿ

|

Updated on: Feb 28, 2025 | 2:11 PM

ಮಂಗಳೂರು: ಕಟೀಲು ಶ್ರೀದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ತಂಗಿ ಶರ್ಮಿತಾ ಶೆಟ್ಟಿ; ದೇವಿ ದರ್ಶನ ಪಡೆದ ನಟಿ ಶಿಲ್ಪಾಶೆಟ್ಟಿ, ತಂಗಿ ಶರ್ಮಿತಾ ಶೆಟ್ಟಿ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದ್ದು. ನೀವು ಅದನ್ನು ವೀಕ್ಷಿಸಬಹುದು.

ಮಂಗಳೂರು, ಫೆಬ್ರವರಿ 28: ಶಿಲ್ಪಾ ಶೆಟ್ಟಿ ಅವರು ಮಂಗಳೂರು ಹಿನ್ನೆಲೆ ಹೊಂದಿದವರು. ಅವರಿಗೆ ತುಳು ಭಾಷೆ ಪರ್ಫೆಕ್ಟ್ ಆಗಿ ಮಾತನಾಡಲು ಬರುತ್ತದೆ. ಅವರಿಗೆ ದೇವರ ಮೇಲೆ ಅಪಾರ ಭಕ್ತಿ. ಸಮಯ ಸಿಕ್ಕಾಗ ದಕ್ಷಿಣ ಕನ್ನಡಕ್ಕೆ ಆಗಮಿಸಿ ಅವರು ದೇವರ ದರ್ಶನ ಪಡೆಯುತ್ತಾರೆ. ಈಗ ಮಂಗಳೂರು ಸಮೀಪದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಶಿಲ್ಪಾ ಶೆಟ್ಟಿ ಜೊತೆ ಅವರ ತಂಗಿ ಶರ್ಮಿತಾ ಶೆಟ್ಟಿ ಕೂಡ ಇದ್ದರು. ಈ ವೇಳೆ, ದೇವರ ಮೇಲೆ ಇರುವ ಹೂವನ್ನು ಕೊಡಿ ಎಂದು ತುಳುವಿನಲ್ಲಿ ಶಿಲ್ಪಾ ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 28, 2025 02:10 PM