ದೇವರ ಮೇಲೆ ಶಿಲ್ಪಾ ಶೆಟ್ಟಿಗೆ ಹೆಚ್ಚುತ್ತಿದೆ ಭಕ್ತಿ; ಜೀವನದಲ್ಲಿ ನಡೆದ ಕಹಿ ಘಟನೆಗಳೇ ಕಾರಣವಾ?
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರೂ ಇದ್ದು, ಸುಮಾರು 90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿ ವಿಚಲಿತರಾಗಿದ್ದಾರೆ.
ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ (Raj Kundra) ಮಾಡಿಕೊಂಡಿರೋ ಎಡವಟ್ಟುಗಳು ಒಂದೆರಡಲ್ಲ. ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಕ್ಕಿ ಬಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರೂ ಇದ್ದು, ಸುಮಾರು 90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರಿಂದ ಶಿಲ್ಪಾ ಶೆಟ್ಟಿ ವಿಚಲಿತರಾಗಿದ್ದಾರೆ. ಆದರೂ ಎಲ್ಲವೂ ಸರಿ ಇದೆ ಎಂಬ ರೀತಿಯಲ್ಲೇ ಅವರು ತೋರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಅವರು ಆಗಾಗ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ತೆರಳಿ ಭೂತ ಕೋಲ ವೀಕ್ಷಿಸಿದ್ದರು. ಈಗ ಅವರು ಮೈಸೂರಿನಲ್ಲಿ ನಂಜನಗೂಡು ನಂಜುಡೇಶ್ವರನ ಸನ್ನಿಧಾನಕ್ಕೆ ತೆರಳಿದ್ದಾರೆ. ಮೈಸೂರಿನಲ್ಲಿ ‘ಕೆಡಿ’ ಶೂಟ್ ನಡೆಯುತ್ತಿದ್ದು, ಇದರ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರು ಸಮಯ ಮಾಡಿಕೊಂಡು ನಂಜುಡೇಶ್ವರಕ್ಕೆ ತೆರಳಿದ್ದಾರೆ. ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಲು ಅವರ ಜೀವನದಲ್ಲಿ ಉಂಟಾಗುತ್ತಿರುವ ಏರಿಳಿತ ಕಾರಣವೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.