ಹನುಮಂತ, ಧನರಾಜ್ ಫಿನಾಲೆಗೆ ಹೋದರೂ ಅಚ್ಚರಿ ಇಲ್ಲ: ಭವಿಷ್ಯ ನುಡಿದ ಶಿಶಿರ್

Edited By:

Updated on: Dec 17, 2024 | 9:07 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಿಂದ ಶಿಶಿರ್​ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹನುಮಂತ ಮತ್ತು ಧನರಾಜ್​ ಅವರಿಗೆ ಬಿಗ್ ಬಾಸ್​ ಫಿನಾಲೆಗೆ ಹೋಗುವ ಸಾಮರ್ಥ್ಯ ಇದೆ ಎಂದು ಶಿಶಿರ್ ಹೇಳಿದ್ದಾರೆ. ಹನುಮಂತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಶಿಶಿರ್​ ಅವರು ವಿವರಿಸಿದ್ದಾರೆ.

‘ರಜತ್, ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಅವರಿಗೆ ಹನುಮಂತ ಹಾಗೂ ಧನರಾಜ್​ ಅವರು ಖಂಡಿತವಾಗಿಯೂ ಟಕ್ಕರ್​ ನೀಡುತ್ತಾರೆ. ಬಿಗ್ ಬಾಸ್ ಮನೆಯ ಮಕ್ಕಳು ಫಿನಾಲೆವರೆಗೆ ಹೋದರೆ ಆಶ್ಚರ್ಯಪಡಬೇಕಾಗಿಲ್ಲ. ಅವರು ತುಂಬ ಚೆನ್ನಾಗಿ ಆಡುತ್ತಿದ್ದಾರೆ. ಹನುಮಂತ ತುಂಬ ಬುದ್ಧಿವಂತಿಕೆಯಿಂದ ಆಡುತ್ತಿದ್ದಾನೆ. ಅವನು ಕೊಡುವ ಕಾರಣಗಳು ತುಂಬ ನೇರವಾಗಿ ಇರುತ್ತವೆ. ಇದೇ ಆಟವನ್ನು ಮುಂದುವರಿಸಿಕೊಂಡು ಹೋದರೆ ಅವನು ಫಿನಾಲೆಯಲ್ಲಿ ಇರುತ್ತಾನೆ’ ಎಂದು ಶಿಶಿರ್​ ಶಾಸ್ತ್ರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More