ಹಬ್ಬದ ದಿನ ಆರಂಭವಾಯ್ತು ಶಿವಣ್ಣನ 131ನೇ ಸಿನಿಮಾ, ಮೊದಲ ಶಾಟ್ ಓಕೆ
ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ಇಂದು (ಆಗಸ್ಟ್ 16) ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತವಾಗಿ ಪ್ರಾರಂಭವಾಗಿದೆ. ಅಪ್ಪ-ಅಮ್ಮ ಹಾಗೂ ಸಹೋದರನ ಸಮಾಧಿಗೆ ನಮಿಸಿ ತಮ್ಮ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ ಶಿವಣ್ಣ. ಇಲ್ಲಿದೆ ನೋಡಿ ಸಿನಿಮಾದ ಮೊದಲ ಶಾಟ್ನ ವಿಡಿಯೋ.
ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ವರಮಹಾಲಕ್ಷ್ಮಿ ಹಬ್ಬವಾದ ಇಂದು (ಆಗಸ್ಟ್16) ಆರಂಭವಾಯ್ತು. ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರುವ ಮುನ್ನ ಶಿವರಾಜ್ ಕುಮಾರ್ ಅವರು ಡಾ ರಾಜ್ಕುಮಾರ್, ಪಾರ್ವತಮ್ಮ ಹಾಗೂ ಸಹೋದರ ಪುನೀತ್ ರಾಜ್ಕುಮಾರ್ ಅವರುಗಳ ಸಮಾಧಿಗೆ ನಮಿಸಿದರು. ಬಳಿಕ ದೇವರ ಪೂಜೆ ಮಾಡಿ, ಸಿನಿಮಾದ ಮೊದಲ ಶಾಟ್ ತೆಗೆಯಲಾಯ್ತು. ಶಿವಣ್ಣನ 131ನೇ ಸಿನಿಮಾವನ್ನು ತಮಿಳಿನ ನಿರ್ದೇಶಕ ಕಾರ್ತಿಕ್ ಅದ್ವೈತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಟೀಸರ್ ಒಂದು ಕಳೆದ ತಿಂಗಳೇ ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಈ ಸಿನಿಮಾ ಪಕ್ಕಾ ರೌಡಿಸಂ ಸಿನಿಮಾ ಆಗಿದ್ದು, ಶಿವಣ್ಣನ ಈ ಹಿಂದಿನ ಸಿನಿಮಾಗಳ ರೆಫರೆನ್ಸ್ಗಳು ಸಹ ಈ ಸಿನಿಮಾದಲ್ಲಿ ಸಿಗಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ