Video: ಕಿಡ್ನ್ಯಾಪ್ ಮಾಡಲು ಬಂದ ವ್ಯಕ್ತಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ

Video: ಕಿಡ್ನ್ಯಾಪ್ ಮಾಡಲು ಬಂದ ವ್ಯಕ್ತಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ

ಅಕ್ಷತಾ ವರ್ಕಾಡಿ
|

Updated on:Aug 16, 2024 | 4:32 PM

ಪುಟ್ಟ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿರುವ ವೇಳೆ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಲು ಯತ್ನಿಸಿದ್ದು, ಈ ವೇಳೆ ಅಲ್ಲೇ ಮಲಗಿದ್ದ ಸಾಕು ನಾಯಿ ಏಕಾಏಕಿ ಆತನ ಮೇಲೆ ದಾಳಿ ಮಗುವನ್ನು ರಕ್ಷಿಸಿದೆ. ವಿಡಿಯೋ ಇಲ್ಲಿದೆ ನೋಡಿ.

ಪುಟ್ಟ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿರುವ ವೇಳೆ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಲು ಯತ್ನಿಸಿದ್ದು, ಈ ವೇಳೆ ಮನೆಯ ಅಂಗಳದಲ್ಲಿ ಮಲಗಿದ್ದ ಸಾಕು ನಾಯಿ ಏಕಾಏಕಿ ಆತನ ಮೇಲೆ ದಾಳಿ ಮಾಡಿ ಮಗುವನ್ನು ರಕ್ಷಿಸಿದೆ. ಸದ್ಯ ಘಟನೆಯ ಸಂಪೂರ್ಣ ದೃಶ್ಯ ಕಟ್ಟಡದ ಮೇಲೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. @gharkekalesh ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ಆಗಸ್ಟ್​​​ 14ರಂದು ಹಂಚಿಕೊಂಡಿರುವ ಈ ವಿಡಿಯೋ ಕೇವಲ ಎರಡೇ ದಿನದಲ್ಲಿ 2.5 ಮಿಲಿಯನ್ ಅಂದರೆ 20ಲಕ್ಷಕ್ಕೂ ಅಧಿಕ​​​ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ಈ ವಿಡಿಯೋ ಲಕ್ಷಾಂತರ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಜೊತೆಗೆ ಸಾಹಸಕ್ಕೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ

Published on: Aug 16, 2024 04:30 PM