Viral: ತ್ರಿವರ್ಣ ಧ್ವಜಕ್ಕೆ ಇದೆಂಥಾ ಅಪಮಾನ…. ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಧ್ವಜದ ಮೇಲೆ ಇಸ್ಪೀಟ್ ಆಡಿದ ಮಹಾನುಭಾವರು
ರಾಷ್ಟ್ರ ಧ್ವಜಕ್ಕೆ ಅದರದ್ದೇ ಆದ ಗೌರವವಿದೆ. ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಧ್ವಜವನ್ನು ಇಳಿಸಿ ಅದನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಅದು ಶಿಕ್ಷಾರ್ಹ ಅಪರಾಧ. ಆದ್ರೆ ಇಲ್ಲೊಂದಷ್ಟು ಮಹಾನುಭವರು ಈ ವಿಷಯ ಗೊತ್ತಿದ್ರೂ ಕೂಡಾ ರಾಷ್ಟ್ರಧ್ವಜವನ್ನು ಗೌರವಿಸದೆ, ಆ ಧ್ವಜವನ್ನು ನೆಲದ ಮೇಲೆ ಹಾಸಿ ಇಸ್ಪೀಟ್ ಆಡಿದ್ದಾರೆ. ಇವರ ಈ ಕೃತ್ಯಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ರಾಷ್ಟ್ರ ಧ್ವಜಕ್ಕೆ ಅದರದ್ದೇ ಆದ ಗೌರವ ಇರುವುದರಿಂದ ಸಂಜೆ ಹೊತ್ತಿನಲ್ಲಿ ಧ್ವಜ ಇಳಿಸುವಾಗ ಯಾವುದೇ ಚ್ಯುತಿ ಬಾರದಂತೆ ಜಾಗ್ರತೆ ವಹಿಸಿ, ಧ್ವಜವನ್ನು ನಿಧಾನಕ್ಕೆ ಇಳಿಸಬೇಕು. ಇಳಿಸಿದ ಮೇಲೆ ಅದನ್ನು ಸರಿಯಾದ ಕ್ರಮದಲ್ಲಿಯೇ ಮಡಚಿ ಇಡಬೇಕು. ತ್ರಿವರ್ಣ ಧ್ವಜವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಮತ್ತು ಅದಕ್ಕೆ ಅಪಮಾನ ಮಾಡುವಂತಿಲ್ಲ. ಹೌದು ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕಾನೂನು ನಿಬಂಧನೆಗಳಿದ್ದು, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸದಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇದು ಗೊತ್ತಿದ್ದೂ ಕೂಡಾ ಇಲ್ಲೊಂದಷ್ಟು ಮಹಾನುಭಾವರು ರಾಷ್ಟ್ರ ಧ್ವಜವನ್ನು ನೆಲೆದ ಮೇಲೆ ಹಾಸಿ ಇಸ್ಪೀಟ್ ಆಡುವ ಮೂಲಕ ಅಪಮಾನ ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ನಿನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೇಶದಾದ್ಯಂತ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಆದರೆ ಉತ್ತರ ಪ್ರದೇಶದ ಮಥುರಾದಲ್ಲಿ ಮಾತ್ರ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದಂತಹ ಘಟನೆ ನಡೆದಿದೆ. ಹೌದು ಮಥುರಾ ಜಿಲ್ಲೆಯ ಲಕ್ಷ್ಮಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿಯ ಸಮೀಪದಲ್ಲಿ ಒಂದಷ್ಟು ಜನ ರಾಷ್ಟ್ರ ಧ್ವಜವನ್ನು ನೆಲಕ್ಕೆ ಹಾಸಿ ಅದರ ಮೇಲೆ ಇಸ್ಪೀಟ್ ಆಡುವ ಮೂಲಕ ಅವಮಾನ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಆಧರಿಸಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ
ಅಘಾತಕಾರಿ ವಿಷಯವೆಂದರೆ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದವರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಸೇರಿದ್ದಾರೆ. ಮತ್ತೊಬ್ಬ ವ್ಯಕ್ತಿ ಅಲ್ಲಿನ ವಿದ್ಯುತ್ ಇಲಾಖೆಯ ಎಸ್ ಡಿಒ ಚಾಲಕ. ಉಳಿದ ಇಬ್ಬರು ಸ್ಥಳೀಯರು. ಈ ನಾಲ್ಕು ಜನ ಧ್ವಜವನ್ನು ನೆಲದ ಮೇಲೆ ಹಾಸಿ ಚಪ್ಪಲಿ, ಶೂ ಹಾಕಿಕೊಂಡೇ ಇಸ್ಪೀಟ್ ಆಡುವ ಮೂಲಕ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಈ ನಾಲ್ವರ ವಿರುದ್ಧ ಜಮುನಾಪರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ