Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ

Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ

ಅಕ್ಷತಾ ವರ್ಕಾಡಿ
|

Updated on: Aug 16, 2024 | 2:00 PM

ದರೋಡೆಕೋರರು ಹೆಲ್ಮೆಟ್ ಧರಿಸಿ ಅಂಗಡಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ತನ್ನ ಹಿಂಬದಿಯಲ್ಲಿ ಇಟ್ಟಿದ್ದ ಕೋಲಿನಿಂದ ನಾಲ್ವರಿಗೆ ಸರಿಯಾಗಿ ಬಾರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಮಹಾರಾಷ್ಟ್ರ: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರು ಖದೀಮರನ್ನು ಚಿನ್ನದ ಅಂಗಡಿ ಮಾಲೀಕ ಕೋಲಿನಿಂದ ಹೊಡೆದು ಓಡಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಎರಡು ಬೈಕಿನಲ್ಲಿ ಬಂದಿದ್ದ ಖದೀಮರು ಪಿಸ್ತೂಲ್ ಹಿಡಿದು ಏಕಾಏಕಿ ಚಿನ್ನದ ಅಂಗಡಿಯೊಳಗೆ ನುಗ್ಗಿದ್ದಾರೆ. ಇದಲ್ಲದೇ ಕೊಲೆ ಅಂಗಡಿ ಮಾಲೀಕನ ತಲೆ ಪಿಸ್ತೂಲ್ ಹಿಡಿದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ದರೋಡೆಕೋರರು ಹೆಲ್ಮೆಟ್ ಧರಿಸಿ ಅಂಗಡಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಮಾಲೀಕ ಬಂದೂಕು ಹಿಡಿದ ನಾಲ್ವರು ಕಳ್ಳರನ್ನು ನೋಡಿ ಹೆದರದೆ ಧೈರ್ಯಮಾಡಿ ತನ್ನ ಹಿಂಬದಿಯಲ್ಲಿ ಇಟ್ಟಿದ್ದ ಕೋಲಿನಿಂದ ನಾಲ್ವರಿಗೆ ಸರಿಯಾಗಿ ಬಾರಿಸಿದ್ದಾರೆ. ಅಂಗಡಿ ಮಾಲೀಕನ ಧೈರ್ಯ ಸಾಹಸಕ್ಕೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ನಾಯಿ ಮಾಡಿದ ಕಿತ್ತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ