ತುಂಗಭದ್ರಾ ಜಲಾಶಯ: ಸ್ಟಾಪ್​ಲಾಗ್ ಗೇಟ್ ಅಳವಡಿಕೆಗೆ ಹಲವು ಅಡಚಣೆ, ಬೀಮ್ ತೆರವುಗೊಳಿಸಿದ ಸಿಬ್ಬಂದಿ

ತುಂಗಭದ್ರಾ ಜಲಾಶಯ: ಸ್ಟಾಪ್​ಲಾಗ್ ಗೇಟ್ ಅಳವಡಿಕೆಗೆ ಹಲವು ಅಡಚಣೆ, ಬೀಮ್ ತೆರವುಗೊಳಿಸಿದ ಸಿಬ್ಬಂದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 16, 2024 | 12:41 PM

ಕಬ್ಬಿಣದ ಬೀಮ್ ಅಲ್ಲದೆ ಜಿಂದಾಲ್ ಸಂಸ್ಥೆಯವರು ತಯಾರಿಸಿರುವ ಗೇಟ್ ನ ಆಕಾರ, ಗಾತ್ರ ಮತ್ತು ವಿನ್ಯಾಸ ಸಹ ಅಳವಡಿಕೆಗೆ ಸಮಸ್ಯೆಯಾಗಿವೆ. ಪ್ರಾಯಶಃ ಅವರು ಗೇಟನ್ನು ಮರುವಿನ್ಯಾಸಗೊಳಿಸಿರಬಹುದು. ಸಂಸ್ಥೆಯ ಇಂಜಿನೀಯರ್​ಗಳು ಯಾವ ಕೆಲಸವನ್ನೂ ಧಾವಂತದಲ್ಲಿ ಮಾಡುತ್ತಿಲ್ಲ, ಅವಸರಿಸಿದರೆ ಜಲಾಶಯಕ್ಕೆ ಧಕ್ಕೆಯಾಗುವ ಅಪಾಯವಿದೆ ಅಂತ ಅವರಿಗೆ ಚೆನ್ನಾಗಿ ಗೊತ್ತಿದೆ.

ಕೊಪ್ಪಳ: ಚೇನ್ ಲಿಂಕ್ ಕಟ್ ಆಗಿ ನೀರಲ್ಲಿ ಕೊಚ್ಚಿ ಹೋಗಿರುವ ಟಿಬಿ ಡ್ಯಾಂ 19ನೇ ಕ್ರೆಸ್ಟ್ ಗೇಟ್ ಮರುಜೋಡಣೆ ಅಥವಾ ಬದಲಿ ಗೇಟ್ ಜೋಡಣೆ ನಿಸ್ಸಂದೇಹವಾಗಿ ಸುಲಭದ ಕೆಲಸವಲ್ಲ. ಜಲಾಶಯದಲ್ಲಿರುವ ಸುಮಾರು 80ಟಿಎಂಸಿ ನೀರಿನ ಒತ್ತಡ ಹಾಗೂ ಇತರ ಅಂಶಗಳು ಸ್ಟಾಪ್​ಲಾಗ್ ಗೇಟ್ ಅಳವಡಿಕೆಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಸ್ಥಳದಿಂದ ಮಾಹಿತಿ ನೀಡುತ್ತಿರುವ ನಮ್ಮ ವರದಿಗಾರ ಹೇಳುವ ಹಾಗೆ ಗೇಟನ್ನು ಕೆಳಗಿಳಿಸಲು ಕ್ರೆಸ್ಟ್ ಗೇಟ್ ಗಳ ಮೇಲೆ ಹೆಚ್ಚಿನ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ಬೀಮ್ ಅಡ್ಡಿಯಾಗಿದ್ದರಿಂದ ಜಿಂದಾಲ್ ಸಂಸ್ಥೆಯ ತಂತ್ರಜ್ಞರು ನಿನ್ನೆ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಇಂದು ಬೆಳಗ್ಗೆ ಕೆಲಸವನ್ನು ಪುನರಾರಂಭಿಸಿರುವ ಇಂಜಿನೀಯರ್ ಗಳು ಮತ್ತು ಸಿಬ್ಬಂದಿ ಮೊದಲಿಗೆ ಕಬ್ಬಿಣದ ಬೀಮ್ ತೆರವುಗೊಳಿಸುವ ಕೆಲಸಕ್ಕೆ ಮುಂದಾದರು. ಅದನ್ನು ಬಿಚ್ಚಿ ಬೇರೆ ಕಡೆ ಸಾಗಿಸುತ್ತಿರುವ ದೃಶ್ಯವನ್ನು ಇಲ್ಲಿ ಕಾಣಬಹುದು. ಇನ್ನು ಮುಂದೆ ಸ್ಟಾಪ್ ಲಾಗ್ ಗೇಟಿನ ಮೊದಲ ಎಲಿಮೆಂಟ್ ಅನ್ನು ಅಳವಡಿಸುವ ಕೆಲಸವನ್ನು ಇಂಜಿನೀಯರ್ ಗಳು ಶುರುಮಾಡಲಿದ್ದಾರೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಟಿಬಿ ಡ್ಯಾಂ: ಬಿಜೆಪಿ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ ಎಂದು ಸಿಟ್ಟಾದ ಸಿಎಂ ಸಿದ್ದರಾಮಯ್ಯ