ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಮೂವರ ಶೋಧ ಕಾರ್ಯಾಚರಣೆಗೆ ಮಳೆ ಅಡ್ಡಿ

ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಮೂವರ ಶೋಧ ಕಾರ್ಯಾಚರಣೆಗೆ ಮಳೆ ಅಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 16, 2024 | 3:26 PM

ಗಂಗಾವಳಿ ನದಿಯಲ್ಲಿ ಮುಳುಗಿರುವ ಟ್ರಕ್ಕನ್ನು ಈಶ್ವರ್ ಮಲ್ಪೆ ಪತ್ತೆ ಮಾಡಿ ಅದರ ಛಾಸ್ಸಿಸ್ ಗೆ ಹಗ್ಗ ಕಟ್ಟಿ ಮೇಲೆತ್ತುವ ಕಾರ್ಯ ನಿನ್ನೆ ನಡೆಯಿತಾದರೂ ವಾಹನವಿನ್ನೂ ನದಿಯಲ್ಲೇ ಇದೆ. ಪ್ರಾಯಶಃ ಅದನ್ನು ನದಿದಡಕ್ಕೆ ಎಳೆಯುವುದು ಕಷ್ಟವಾಗುತ್ತಿರಬಹುದು. ಸ್ವಲ್ಪ ಹೊತ್ತಿನಲ್ಲಿ ಅದನ್ನು ಮೇಲೆತ್ತಲಾಗುವುದು ಎಂದು ಈಶ್ವರ್ ನಿನ್ನೆ ಹೇಳಿದ್ದರು.

ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾಗಿ ಸಂಭವಿಸಿದ ದುರಂತದಲ್ಲಿ 8 ಜನರ ಮೃತದೇಹಗಳು ಪತ್ತೆಯಾಗಿವೆ ಮತ್ತು ಇನ್ನೂ ಮೂರು ದೇಹಗಳಿಗಾಗಿ ಶೋಧಕಾರ್ಯವನ್ನು ಮುಳುಗುತಜ್ಞ ಮತ್ತು ಸ್ಕೂಬಾ ಡೈವರ್ ಈಶ್ವರ್ ಮಲ್ಪೆ ನೇತೃತ್ವದ ತಂಡ ಇಂದು ಮುಂದುವರಿಸಿದೆ. ಆದರೆ ಯಲ್ಲಾಪುರ ಭಾಗದಲ್ಲಿ ಕಳೆದ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿರುವ ಕಾರಣ ಗಂಗಾವಳಿ ನದಿಗೆ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದ್ದು ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಮಳೆನೀರು ಕೆಂಪುಮಣ್ಣಿನೊಂದಿಗೆ ಬೆರೆಯುತ್ತಿರುವುದರಿಂದ ನದಿಯ ನೀರು ಸಹ ಕೆಂಪು ಬಣ್ಣಕ್ಕೆ ತಿರುಗಿದೆ. ಸ್ಕೂಬಾ ಡೈವರ್​ಗಳಿಗೆ ತಿಳಿಯಾದ ನದಿನೀರಲ್ಲಿ ಕಾರ್ಯಾಚರಣೆ ನಡೆಸುವುದು ಅಂದರೆ ನದಿಯ ಆಳಕ್ಕೆ ಹೋಗಿ ದೇಹಗಳನ್ನು ಹುಡುಕಾಡುವುದು ಸುಲುಭ ಎಂದು ಹೇಳಲಾಗುತ್ತಿದೆ. ಈಶ್ವರ್ ಮಲ್ಪೆಯವರ ತಂಡದೊಂದಿಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ, ಸ್ಥಳೀಯ ನುರಿತ ಈಜುಗಾರರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲ ರೀತಿಯ ನೆರವನ್ನು ಈಜುಗಾರರಿಗೆ ಒದಗಿಸುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಬಳಿ ನೀರುಪಾಲು; ಆಪತ್ಬಾಂಧವ ಸಿಬ್ಬಂದಿ ಈಶ್ವರ್​ನಿಂದ ಓರ್ವ ಯುವತಿಯ ರಕ್ಷಣೆ