ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಿಂದ ನನ್ನ ಮಗ ಕಾಂತೇಶ್ ಸ್ಪರ್ಧಿಸಲ್ಲ: ಕೆಎಸ್ ಈಶ್ವರಪ್ಪ
ಅಸಲಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಬಹಳ ಕೆಟ್ಟದ್ದಾಗಿ ಕೈ ಸುಟ್ಟುಕೊಂಡಿರುವ ಈಶ್ವರಪ್ಪ ಅವರಿಗೆ ತಮ್ಮ ಮಗನನ್ನು ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಮತ್ತೊಮ್ಮೆ ಮುಖಭಂಗ ಅಗೋದು ಬೇಕಿಲ್ಲ. ಹಾಗಾಗೇ, ಏನೇನೋ ಸಬೂಬು ಮತ್ತು ನೆಪಗಳನ್ನು ಹೇಳುತ್ತಿದ್ದಾರೆ
ಶಿವಮೊಗ್ಗ: ಶಿಗ್ಗಾಂವ್ಗೆ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ತನ್ನ ಮಗ ಕಾಂತೇಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲವೆಂದು ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಅವರು ಕಾಂತೇಶ್ ಯಾಕೆ ಸ್ಪರ್ಧೆ ಮಾಡಲ್ಲ ಅನ್ನೋದಕ್ಕೆ ನೀಡಿದ ಕಾರಣ ವಿಚಿತ್ರವಾಗಿತ್ತು. ಹಾವೇರಿಯ ಜನ ಈಗಲೂ ಈಶ್ವರಪ್ಪ ಮನೆಗೆ ಬಂದು ಹಾವೇರಿ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಅವರಿಗೆ ದೊಡ್ಡ ಮೋಸವಾಗಿದೆ, ಆದರೆ ತಾನು ಚಿಂತಿಸುವ ಅಗತ್ಯವಿಲ್ಲ, ಕಾಲಚಕ್ರ ಸುತ್ತುತ್ತಿರುತ್ತದೆ, ಈಗ ಬಿಎಸ್ ಯಡಿಯೂರಪ್ಪ ಕುಟುಂಬದ ಸಮಯ ಮತ್ತು ಗಳಿಗೆ ಚೆನ್ನಾಗಿದೆ, ಆದರೆ ಮುಂದೆ ಅದು ಬದಲಾಗಲಿದೆ, ತನಗೆ ಮೋಸ ಮಾಡಿದವರಿಗೆ ಭಗವಂತ ಖಂಡಿತ ನ್ಯಾಯ ತೀರಿಸುತ್ತಾನೆ ಎನ್ನುತ್ತಿದ್ದಾರೆ ಎಂದು ಈಶ್ವರಪ್ಪ ಹೇಳುತ್ತಾರೆ.
ಅವರ ಸ್ವರದಲ್ಲಿ ನಿರಾಶೆ ಮತ್ತು ಹತಾಶೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಅವರಿಗೆ ಬಿಜೆಪಿಗೆ ವಾಪಸ್ಸು ಹೊಗೋದು ಬೇಕಾಗಿದೆ ಆದರೆ ದುರದೃಷ್ಟವಶಾತ್ ಅವರ ಪರ ರಾಜ್ಯದ ಯಾವ ನಾಯಕನೂ ಬ್ಯಾಟ್ ಮಾಡುತ್ತಿಲ್ಲ. ಪಕ್ಷಕ್ಕೆ ವಾಪಸ್ಸು ಬರುವಂತೆ ಅನೇಕ ನಾಯಕರು ಹೇಳುತ್ತಿದ್ದಾರೆ ಅಂತ ಈಶ್ವರಪ್ಪ ಆಗಾಗ ಬೊಗಳೆ ಬಿಡುತ್ತಿರುತ್ತಾರೆ. ಅಂಥದ್ದೇನೂ ನಡೆಯುತ್ತಿಲ್ಲ ಅನ್ನೋದು ಬೇರೆ ವಿಚಾರ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿಯ 22 ಶಾಸಕರ ಪಾದಯಾತ್ರೆ ತಡೆಯದಿದ್ದರೆ ಪಕ್ಷಕ್ಕೆ ಆಪತ್ತು ಎದುರಾಗಲಿದೆ: ಕೆಎಸ್ ಈಶ್ವರಪ್ಪ