AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಉಬರ್​​ನಲ್ಲಿ ಪ್ರಯಾಣಿಸುವುದು ಇಷ್ಟೊಂದು ದುಬಾರಿಯೇ…. 1.8 ಕಿಮೀಗೆ 699 ರೂ. ಬೆಲೆ ನೋಡಿ ಯುವಕ ಶಾಕ್

ಓಲಾ, ಊಬರ್‌ನಂತಹ ಟ್ಯಾಕ್ಸಿ ವ್ಯವಸ್ಥೆಗಳು ಬಂದ ನಂತರ ಜನರಿಗೆ ತುಂಬಾನೇ ಅನುಕೂಲಗಳಾಗಿವೆ. ಆದ್ರೆ ದಿನ ಕಳೆದಂತೆ ಓಲಾ ಇತ್ಯಾದಿ ಟ್ಯಾಕ್ಸಿ ಸಂಸ್ಥೆಗಳು ಜನರಿಂದ ವಸೂಲಿಗೆ ಮಾಡುತ್ತಿವೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ಪೋಸ್ಟ್ ಒಂದು ಇದೀಗ ವೈರಲ್ ಆಗಿದೆ. ಕೇವಲ 1.8 ಕಿಮೀ ಪ್ರಯಾಣಿಸಲು ಊಬರ್ 699 ರೂ ಬೆಲೆ ವಿಧಿಸಿದ್ದು, ಊಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದು ಇಷ್ಟೊಂದು ದುಬಾರಿಯೇ ಎಂದು ಯುವಕನೊಬ್ಬ ಪ್ರಶ್ನಿಸಿದ್ದಾನೆ.

Viral: ಉಬರ್​​ನಲ್ಲಿ ಪ್ರಯಾಣಿಸುವುದು ಇಷ್ಟೊಂದು ದುಬಾರಿಯೇ.... 1.8 ಕಿಮೀಗೆ 699 ರೂ. ಬೆಲೆ ನೋಡಿ ಯುವಕ ಶಾಕ್
ವೈರಲ್​​ ಪೋಸ್ಟ್​​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 16, 2024 | 5:59 PM

Share

ಓಲಾ, ಊಬರ್ ಇತ್ಯಾದಿ ಆ್ಯಪ್‌ ಆಧಾರಿತ ಆಟೋ, ಕ್ಯಾಬ್‌ಗಳು ಜನರಿಗೆ ತಮ್ಮ ಸ್ವಂತ ವಾಹನದಂತೆ ಯಾವಾಗ ಬೇಕಿದ್ದರೂ ಲಭ್ಯವಿರುವಂತಹ ಸೇವೆಯಾಗಿದೆ. ಕ್ಷಣಾರ್ಧದಲ್ಲಿ ಫೋನ್‌ ಮೂಲಕ ಬುಕ್‌ ಮಾಡಿ ಹೋಗುವ ಈ ಟ್ಯಾಕ್ಸಿ ವ್ಯವಸ್ಥೆಗಳು ಜನರಿಗೆ ತುಂಬಾನೇ ಅನುಕೂಲಕರವಾಗಿದೆ. ಆದ್ರೆ ದಿನ ಕಳೆದಂತೆ ಈ ಟ್ಯಾಕ್ಸಿ ಸೇವೆಗಳು ಜನರಿಂದ ಹೆಚ್ಚಿನ ಹಣ ಪೀಕುತ್ತಿವೆ. ಅದ್ರಲ್ಲೂ ಈ ಮಳೆಗಾಲದಲ್ಲಿ ಬಾಡಿಗೆ ಹಣವನ್ನೇ ಹೆಚ್ಚು ಮಾಡುತ್ತವೆ. ಇಲ್ಲೊಬ್ಬ ಯುವಕನಿಗೂ ಇದೇ ರೀತಿಯ ಅನುಭವವಾಗಿದ್ದು, ಕೇವಲ 1.8 ಕಿಮೀ ಪ್ರಯಾಣಿಸಲು ಊಬರ್ 699 ರೂ ಬೆಲೆ ವಿಧಿಸಿರುವುದು ಎಷ್ಟು ಸರಿ ಎಂದು ಆ ಯುವಕ ಪ್ರಶ್ನಿಸಿದ್ದಾನೆ. ಈ ಕುರಿತ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ದೆಹಲಿಯ ಯುವಕ ಸೂರ್ಯ ಪಾಂಡೆ ಲಿಂಕ್ಡ್‌ಇನ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಉಬರ್‌ ವಿಧಿಸಿರುವ ಅತಿಯಾದ ದರಗಳ ಬಗ್ಗೆ ಟೀಕಿಸಿದ್ದಾನೆ. “ಉದಾಹರಣೆಗೆ ಉಬರ್, ರಾಪಿಡೋ, ಓಲಾ ಇತ್ಯಾದಿಗಳನ್ನು ತೆಗೆದುಕೊಳ್ಳಿ, ಈ ಕ್ಯಾಬ್ ಗಳು ಮೊದಲು ಬಂದಾಗ ಪ್ರಯಾಣಿಕರಿಗೆ ಕೈಗೆಟುಕುವ ಬೆಲೆಗೆ ಸೇವೆಯನ್ನು ಪ್ರಾರಂಭಿಸಿದವು. ಆದರೆ ಇದೀಗ ಇವು ಹೆಚ್ಚಿನ ಬೆಲೆಯನ್ನು ವಿಧಿಸುತ್ತಿದೆ. ಅದರಲ್ಲೂ ಪೀಕ್ ಟೈಮ್ ಅಲ್ಲಿ ಟ್ಯಾಕ್ಸಿ ಬೆಲೆ 300% ರಷ್ಟು ಗಗನಕ್ಕೇರುತ್ತವೆ. ಇವೆಲ್ಲವನ್ನೂ ನೋಡಿದಾಗ ಬೇರೆ ವಾಹನದವರಲ್ಲಿ ಲಿಫ್ಟ್ ಕೇಳುವುದೇ ಸೂಕ್ತ” ಎಂಬ ಸುದೀರ್ಘ ಬರಹವನ್ನು ಬರೆದುಕೊಂದಿದ್ದಾನೆ. ವೈರಲ್ ಆಗಿರುವ ಸ್ಕ್ರೀನ್ ಶಾಟ್ ಫೋಟೋದಲ್ಲಿ ಊಬರ್ ಗೋ ಆಪ್ ನಲ್ಲಿ 1.8 ಕಿಮೀಗೆ 699 ರೂ ಬೆಲೆ ವಿಧಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ: 12 ವರ್ಷದ ಬಾಲಕಿಗೆ 62ರ ವೃದ್ಧನ ಜೊತೆ ಬಲವಂತವಾಗಿ ಮದುವೆ ಮಾಡಿಸಲು ಮುಂದಾದ ಕುಟುಂಸ್ಥರು

ವೈರಲ್​​​ ಪೋಸ್ಟ್​​ ಇಲ್ಲಿದೆ:

ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು ಹಲವಾರು ಕಾಮೆಂಟ್ಸ್ ಗಳನ್ನು ಕೂಡಾ ಪಡೆದುಕೊಂಡಿದೆ. ಒಬ್ಬ ವ್ಯಕ್ತಿ ‘ನಾನು ದಿನವಿಡೀ ಸಾಕಷ್ಟು ಪ್ರಯಾಣಿಸುತ್ತೇನೆ, ಆದರೆ ಮುಂಬೈ, ದೆಹಲಿ, ಕೋಲ್ಕತ್ತಾದಂತಹ ನಗರಗಳಲ್ಲಿ ನಾನು ಓಲಾ ಅಥವಾ ಉಬರ್ ಬಳಸುವುದನ್ನೇ ನಿಲ್ಲಿಸಿದ್ದೇನೆ. ಅವು ಖಂಡಿತವಾಗಿಯೂ ಟ್ಯಾಕ್ಸಿಗಳನ್ನು ಬುಕಿಂಗ್ ಮಾಡುವ ವಿಶ್ವಾಸಾರ್ಹ ಮೂಲವಲ್ಲ’ ಎಂದು ಹೇಳಿದ್ದಾರೆ. ಇನ್ನೊಬ್ಬರು ‘ಇಂತಹ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಬದಲು ನಡೆದುಕೊಂಡು ಹೋಗುವ ಮೂಲಕ ಅರೋಗ್ಯವನ್ನು ವೃದ್ಧಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ