Video: 12 ವರ್ಷದ ಬಾಲಕಿಗೆ 62ರ ವೃದ್ಧನ ಜೊತೆ ಬಲವಂತವಾಗಿ ಮದುವೆ ಮಾಡಿಸಲು ಮುಂದಾದ ಕುಟುಂಸ್ಥರು
ಬಲವಂತವಾಗಿ ಮದುವೆ ಮಾಡುವಂತಹದ್ದು, ಬಾಲ್ಯ ವಿವಾಹ ಮಾಡುವುದು ಇವೆಲ್ಲಾ ಕಾನೂನಿನ ಪ್ರಕಾರ ಅಪರಾಧ. ಹೀಗಿದ್ದರೂ ಕದ್ದು ಮುಚ್ಚಿ ಬಾಲ್ಯ ವಿವಾಹ ಮಾಡುವವರಿದ್ದಾರೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ನನ್ಗೆ ಈ ಮದುವೆ ಬೇಡಾ ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಗೋಳಾಡಿದರೂ, ಕುಟುಂಬಸ್ಥರು 12 ವರ್ಷದ ಬಾಲಕಿಗೆ 62 ವರ್ಷದ ವೃದ್ಧನ ಜೊತೆ ಮದುವೆಯಾಗುವಂತೆ ಬಲವಂತ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಾಲ್ಯ ವಿವಾಹದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಈ ಅನಿಷ್ಠ ಪದ್ಧತಿಯನ್ನು ಜನ ಕೈಬಿಡುತ್ತಿಲ್ಲ. ಇಂದಿಗೂ ಕೂಡಾ ಕೆಲವೊಂದು ಕಡೆ ಕದ್ದು ಮುಚ್ಚಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳಿಗೆ ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ. ಇಂತಹ ಕೆಲವೊಂದು ಪ್ರಕರಣಕ್ಕೆ ಸಂಬಂಧಪಟ್ಟ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, 12 ವರ್ಷದ ಬಾಲಕಿಯೊಬ್ಬಳಿಗೆ ಆಕೆಯ ಮನೆಯವರು 62 ವರ್ಷ ವಯಸ್ಸಿನ ಮುದುಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ನನಗೆ ಈ ಮದುವೆ ಬೇಡ ಎಂದು ಬಾಲಕಿ ಅತ್ತು ಕರೆದು ಕೇಳಿಕೊಂಡರೂ ಕ್ಯಾರೇ ಅನ್ನದೇ ಆಕೆಯ ಮನೆಯವರು ಆಕೆಗೆ 62 ರ ವೃದ್ಧನ ಜೊತೆಗೆ ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
A 12-year-old girl being forced by her own family to marry a 62-year-old man. Where is the outrage over this? pic.twitter.com/h87WhQjD04
— TaraBull (@TaraBull808) August 15, 2024
TaraBull ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “12 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ 62 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆಲ್ಲ ಆಕ್ರೋಶ ಎಲ್ಲಿದೆ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ 12 ವರ್ಷದ ಬಾಲಕಿಗೆ ಆಕೆಯ ಮನೆಯವರು 62 ರ ವೃದ್ಧನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆ ನನ್ಗೆ ಈ ಮದುವೆ ಬೇಡಾ ಎಂದು ಅತ್ತು ಕರೆದು ಕೇಳಿಕೊಂಡರೂ ಆಕೆಯ ಮನೆಯವರು ಸಹಿ ಹಾಕುವಂತೆ ಬಲವಂತ ಮಾಡಿದ್ದಾರೆ.
ಇದನ್ನೂ ಓದಿ: ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ
ಆಗಸ್ಟ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ಅಪರಾಧವಾಗಿದ್ದು, ನಾವೆಲ್ಲರೂ ಇದರ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂಬ ಕಾಮೆಂಟ್ ಬರೆದುಕೊಂದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇದಕ್ಕಿಂತ ದುಷ್ಟತನ ಮತ್ತೊಂದಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ