‘ಘೋಸ್ಟ್’ ಸಿನಿಮಾ ನೋಡಲು ಕೆಲವು ಸಲಹೆ ಕೊಟ್ಟ ನಟ ಶಿವರಾಜ್ ಕುಮಾರ್

Updated on: Oct 22, 2023 | 10:09 PM

Shiva Rajkumar: ಶಿವರಾಜ್ ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಿಡುಗಡೆ ಆಗಿದ್ದು ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. 'ಘೋಸ್ಟ್' ಸಿನಿಮಾವನ್ನು ನೋಡುವವರು ಯಾವ ಮನಸ್ಥಿತಿ ಇಟ್ಟುಕೊಂಡು ಈ ಸಿನಿಮಾ ನೋಡಬೇಕು ಎಂಬುದನ್ನು ಸಹ ಶಿವರಾಜ್ ಕುಮಾರ್ ಹೇಳಿದ್ದಾರೆ.

ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಬಿಡುಗಡೆ ಆಗಿದ್ದು ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಟಿವಿ9 ಗೆ ‘ಘೋಸ್ಟ್’ ಸಿನಿಮಾ ಬಗ್ಗೆ ವಿಶೇಷ ಸಂದರ್ಶನ ನೀಡಿರುವ ಶಿವರಾಜ್ ಕುಮಾರ್ ಸಿನಿಮಾದ ಬಗ್ಗೆ ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ. ತಾವೇಕೆ ಈ ಸಿನಿಮಾ ಒಪ್ಪಿಕೊಂಡಿದ್ದು ಎಂಬ ಬಗ್ಗೆ ಮಾತನಾಡುತ್ತಾ, ಕತೆ ಹೇಳಿದ್ದು ಶಕ್ತಿಧಾಮದಲ್ಲಿ ಆ ಪಾಸಿಟಿವ್ ವೈಬ್ ಇದ್ದ ಕಾರಣ ಕೂಡಲೇ ಕತೆ ಒಪ್ಪಿಕೊಂಡೆ, ಅಲ್ಲದೆ ಸಂದೇಶ್ ನಾಗರಾಜ್ ಪಾಲಿಗೆ ನಾನು ಅದೃಷ್ಟದ ನಟ, ನನಗೂ ಸಹ ಆ ನಿರ್ಮಾಣ ಸಂಸ್ಥೆ ಅದೃಷ್ಟದ ನಿರ್ಮಾಣ ಸಂಸ್ಥೆ ಆ ಒಗ್ಗಟ್ಟನ್ನು, ಸಂಪ್ರದಾಯವನ್ನು ಬಿಟ್ಟುಕೊಡುವುದು ಬೇಡವೆಂದು ಒಪ್ಪಿಕೊಂಡೆ ಎಂದರು. ಅಲ್ಲದೆ, ‘ಘೋಸ್ಟ್’ ಸಿನಿಮಾವನ್ನು ನೋಡುವವರು ಯಾವ ಮನಸ್ಥಿತಿ ಇಟ್ಟುಕೊಂಡು ಈ ಸಿನಿಮಾ ನೋಡಬೇಕು ಎಂಬುದನ್ನು ಸಹ ಶಿವರಾಜ್ ಕುಮಾರ್ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More