ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು

|

Updated on: Jan 26, 2025 | 1:30 PM

Geetha Shiva Rajkumar: ಮಾರಕ ಕ್ಯಾನ್ಸರ್ ವಿರುದ್ಧ ಹೋರಾಡಿ ಶಿವಣ್ಣ ಗೆದ್ದು ಬಂದಿದ್ದಾರೆ. ಅವರ ಈ ಹೋರಾಟದಲ್ಲಿ ಹಲವಾರು ಮಂದಿ ಅವರಿಗೆ ಸಾಥ್ ನೀಡಿದ್ದಾರೆ. ಅದರಲ್ಲೂ ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಪಾತ್ರ ಅತ್ಯಂತ ಮಹತ್ವದಾದುದು. ಗುಣಮುಖರಾಗಿ ಬೆಂಗಳೂರಿಗೆ ಮರಳಿರುವ ಶಿವಣ್ಣ, ಪತ್ನಿ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ.

ಶಿವರಾಜ್ ಕುಮಾರ್ ಅನಾರೋಗ್ಯದಿಂದ ಗುಣಮುಖರಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕ್ಯಾನ್ಸರ್ ವಿರುದ್ಧದ ಅವರ ಈ ಹೋರಾಟದಲ್ಲಿ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಪಾತ್ರ ಬಹಳ ಮಹತ್ವವಾದುದು. ಪತಿಯೊಂದಿಗೆ ಅಮೆರಿಕಕ್ಕೆ ತೆರಳಿದ್ದ ಗೀತಾ ಶಿವರಾಜ್ ಕುಮಾರ್ ಪತಿಯ ಜೊತೆಗಿದ್ದು ಎಲ್ಲ ರೀತಿಯ ಸೇವೆಗಳನ್ನು ಮಾಡಿದ್ದಾರೆ. ಮಹಿಳೆಯಾಗಿದ್ದುಕೊಂಡು ಪತಿ ಗುಣಮುಖವಾಗಲೆಂದು ಹರಿಸಿಕೊಂಡು ಮುಡಿ ಕೊಟ್ಟಿದ್ದಾರೆ. ಈ ಹಿಂದೆಯೂ ಸಹ ಶಿವಣ್ಣನಿಗೆ ಅನಾರೋಗ್ಯವಾಗಿದ್ದಾಗ ಗೀತಾ ಅವರು ಹೀಗೆ ಮುಡಿ ಕೊಟ್ಟಿದ್ದರು. ಇದೀಗ ಶಿವಣ್ಣ ಗುಣಮುಖವಾಗಿ ಮರಳಿದ್ದು, ಮಾಧ್ಯಮಗಳ ಬಳಿ ಮಾತನಾಡುತ್ತಾ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸೇವೆಯನ್ನು ಕೊಂಡಾಡಿದರು. ಅವರು ಪತ್ನಿ ಮಾತ್ರವಲ್ಲ ತಾಯಿಯ ರೀತಿ ಎಂದು ಭಾವುಕರಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 26, 2025 01:27 PM