ಪಿವಿಆರ್ನವರಿಗೆ ಕೊಂಬಿದ್ರೆ ಒಳ್ಳೆಯದಕ್ಕೆ ಬಳಸಲಿ, ತಿವಿಯಲು ಬರುವುದು ಬೇಡ: ಶಿವಣ್ಣ ಖಡಕ್ ವಾರ್ನಿಂಗ್
Shiva Rajkumar: ಚೆನ್ನಾಗಿ ಓಡುತ್ತಿರುವ ಕನ್ನಡ ಸಿನಿಮಾಕ್ಕೂ ಶೋಗಳ ಸಂಖ್ಯೆ ಕಡಿಮೆ ಮಾಡಿ ಸಮಸ್ಯೆ ನೀಡುತ್ತಿರುವ ಮಲ್ಟಿಪ್ಲೆಕ್ಸ್ಗಳ ವಿರುದ್ಧ ನಟ ಶಿವರಾಜ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಿವಿಆರ್ಗೆ ಏನು ಕೊಂಬಿದ್ಯಾ ಎಂದು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ‘ಘೋಸ್ಟ್’ ಜೊತೆಗೆ ಬಿಡುಗಡೆ ಆಗಿರುವ ‘ಲಿಯೋ’, ‘ಭಗವಂತ್ ಕೇಸರಿ’, ‘ಟೈಗರ್ ನಾಗೇಶ್ವರ ರಾವ್’ ಸಿನಿಮಾಗಳಿಗೆ ಹೆಚ್ಚಿನ ಶೋ ದೊರೆತಿದ್ದು ‘ಘೋಸ್ಟ್’ನ ಶೋಗಳ ಸಂಖ್ಯೆಯಲ್ಲಿ ಇಳಿಮುಖ ಆಗಿದೆ. ಮಲ್ಟಿಪ್ಲೆಕ್ಸ್ಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿವೆ ಎನ್ನಲಾಗುತ್ತಿದೆ. ಮಲ್ಟಿಪ್ಲೆಕ್ಸ್ಗಳ ಈ ಪಕ್ಷಪಾತದ ಬಗ್ಗೆ ನಟ ಶಿವರಾಜ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನಾಗಿ ಓಡುತ್ತಿರುವ ಸಿನಿಮಾಗಳಿಗೆ ಸಮಸ್ಯೆ ಮಾಡುವುದು ಸರಿಯಲ್ಲ. ಬೇರೆ ಸಿನಿಮಾಗಳಿಗೆ ಕಡಿಮೆ ಶೋ ಕೊಡಿ ಎಂಬುದು ನಮ್ಮ ವಾದವಲ್ಲ, ಆದರೆ ಚೆನ್ನಾಗಿ ಓಡುತ್ತಿರುವ ಸಿನಿಮಾಕ್ಕೆ ತೊಂದರೆ ಮಾಡಬೇಡಿ ಎಂಬುದಷ್ಟೆ ನಮ್ಮ ಬೇಡಿಕೆ. ಸೌಂಡ್ ಕ್ಯಾಲಿಟಿ ಚೆನ್ನಾಗಿದೆ, ಸಿನಿಮಾ ನೋಡುವಾಗ ಪಾಪ್ಕಾರ್ನ್-ಪೆಪ್ಸಿ ಹಿಡಿದುಕೊಂಡು ಸಿನಿಮಾ ನೋಡುತ್ತಾರೆ ಎಂಬುದು ಬಿಟ್ಟರೆ, ಸಿಂಗಲ್ ಸ್ಕ್ರೀನ್ಗೂ ಮಲ್ಟಿಪ್ಲೆಕ್ಸ್ಗೂ ವ್ಯತ್ಯಾಸವೇನೂ ಇಲ್ಲ. ಹಾಗಾಗಿ ಮಲ್ಟಿಪ್ಲೆಕ್ಸ್ಗಳು ನೋಡಿಕೊಂಡು ವ್ಯವಹರಿಸಬೇಕು, ಪಿವಿಆರ್ಗೆ ಏನು ಕೊಂಬಿದ್ಯಾ? ಅವರಿಗೆ ಕೊಂಬು ಇದ್ದರೆ, ಅದನ್ನು ಒಳ್ಳೆಯದಕ್ಕೆ ಬಳಸಲಿ, ತಿವಿಯಲು ಬರುವುದು ಬೇಡ. ಅವರಿಗೆ ಯಾವ ರೀತಿ, ಯಾರು ಬುದ್ಧಿ ಕಲಿಸಬೇಕೊ ಅವರು ಕಲಿಸುತ್ತಾರೆ. ಈಗಾಗಲೇ ಬುದ್ಧಿ ಕಲಿತಂತಿದೆ” ಎಂದರು ಶಿವರಾಜ್ ಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ