ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

|

Updated on: Dec 24, 2024 | 1:26 PM

Shiva Rajkumar Health: ಶಿವರಾಜ್ ಕುಮಾರ್ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದು, ಇಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಇದೇ ಕಾರಣಕ್ಕೆ ಶಿವಣ್ಣ ಅವರ ಅಭಿಮಾನಿಗಳು ರಾಜ್ಯದ ಹಲೆವೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಅನ್ನಸಂತರ್ಣೆ, ಹೋಮ ಇತ್ಯಾದಿಗಳನ್ನು ಮಾಡಿಸಿದ್ದಾರೆ. ವಿಡಿಯೋ ಇಲ್ಲಿದೆ...

ಶಿವರಾಜ್ ಕುಮಾರ್ ಅವರಿಗೆ ಇಂದು (ಡಿಸೆಂಬರ್ 24) ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಅವರ ಅಭಿಮಾನಿಗಳು ರಾಜ್ಯದ ಹಲವು ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಮೈಸೂರು, ಚಾಮರಾಜಪೇಟೆ, ಬೆಂಗಳೂರು ಇನ್ನೂ ಹಲವು ನಗರಗಳ ದೇವಾಲಯಗಳಲ್ಲಿ ಅಭಿಮಾನಿಗಳು ಪೂಜೆ, ಅನ್ನಸಂತರ್ಪಣೆ ಮತ್ತು ಹೋಮಗಳನ್ನು ಮಾಡಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯಲೆಂದು ಅಮೆರಿಕಕ್ಕೆ ತೆರಳಿದ್ದು, ಅಲ್ಲಿನ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಶಿವಣ್ಣ ಚಿಕಿತ್ಸೆ ಪಡೆಯಲಿದ್ದಾರೆ. ಮುಂದಿನ ಅಂದರೆ ಜನವರಿ 26 ರವರೆಗೆ ಶಿವಣ್ಣ ಅಮೆರಿಕದಲ್ಲಿಯೇ ಇರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 24, 2024 12:53 PM