ಯುವ ದಸರಾನಲ್ಲಿ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ

ಯುವ ದಸರಾನಲ್ಲಿ ‘ಘೋಸ್ಟ್’: ಹಾಡಿ-ಕುಣಿದು ರಂಜಿಸಿದ ಶಿವಣ್ಣ

ಮಂಜುನಾಥ ಸಿ.
|

Updated on: Oct 18, 2023 | 11:17 PM

Shiva Rajkumar: ಯುವ ದಸರಾನಲ್ಲಿ ಭಾಗವಹಿಸಿದ್ದ ನಟ ಶಿವರಾಜ್ ಕುಮಾರ್, ತಮ್ಮ ಎಂದಿನ ಎನರ್ಜಿಯಲ್ಲಿ ವೇದಿಕೆ ಮೇಲೆ ಹಾಡಿ ಕುಣಿದು ಸಭಿಕರ ಮನರಂಜಿಸಿದರು. ಜೊತೆಗೆ ಯುವಕರಿಗೆ ತುಸು ಹಿತವಚನವನ್ನೂ ಸಹ ಹೇಳಿದರು.

ಮೈಸೂರು ದಸರಾದ (Dasara) ಭಾಗವಾದ ಯುವ ದಸರಾನಲ್ಲಿ ಇಂದು ಪ್ರಮುಖ ಆಕರ್ಷಣೆ ಶಿವರಾಜ್ ಕುಮಾರ್ (Shiva Rajkumar). ವೇದಿಕೆ ಏರಿ ಹಾಡು ಹಾಡಿ, ಡ್ಯಾನ್ಸ್ ಮಾಡಿ ರಂಜಿಸಿದರು ಶಿವಣ್ಣ. ಯುವಕರಂತೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್, ಆಕಾಶವೇ ಬೀಳಲಿ ಮೇಲೆ, ಟುವ್ವಿ ಟುವ್ವಿ ಹಾಗೂ ಮತ್ತುಣ್ಣ ಪೀಪಿ ಊದುವ ಹಾಡು ಹಾಡಿ ರಂಜಿಸಿದರು. ಜೊತೆಗೆ ನಾಳೆ ಬಿಡುಗಡೆ ಆಗಲಿರುವ ‘ಘೋಸ್ಟ್’ ಸಿನಿಮಾದ ಖಡಕ್ ಡೈಲಾಗ್ ಅನ್ನೂ ಹೇಳಿದರು. ಜೊತೆಗೆ ”ಯುವಕರು ಹೆಚ್ಚು ಜಾಗರೂಕತೆಯಿಂದ ಇರಬೇಕು, ಎಂಜಾಯ್ ಮಾಡಿ ಆದರೆ ಅದು ಮಿತದಲ್ಲಿರಲಿ, ಎಲ್ಲದಕ್ಕಿಂತಲೂ ಮುಖ್ಯವಾಗಿ ತಂದೆ-ತಾಯಿಯರನ್ನು ಗೌರವಿಸಿ, ಓದುವ ಹೊತ್ತಿನಲ್ಲಿ ಮನಸ್ಸಿಟ್ಟು ಓದಿ, ಆಡುವ ಸಮಯದಲ್ಲಿ ಮನಸಿಟ್ಟು ಆಡಿ. ಈಗಿನ ಯುವಕರು ಬಹಳ ಬುದ್ಧಿವಂತರು, ಬಹಳ ಮುಂದುವರೆದಿದ್ದಾರೆ. ನೀವು ಚೆನ್ನಾಗಿರೋದನ್ನಷ್ಟೆ ನಾವು ಬಯಸುವುದು” ಎಂದು ಹಿತವಚನವನ್ನೂ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ