AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiva Rajkumar: ಯಶ್​ರನ್ನು ಹಾಡಿಹೊಗಳಿದ ಶಿವಣ್ಣ; ವಿಡಿಯೋ ನೋಡಿ

Shiva Rajkumar: ಯಶ್​ರನ್ನು ಹಾಡಿಹೊಗಳಿದ ಶಿವಣ್ಣ; ವಿಡಿಯೋ ನೋಡಿ

TV9 Web
| Updated By: shivaprasad.hs|

Updated on: Oct 27, 2021 | 8:27 AM

Share

Yash: ಬಹುನಿರೀಕ್ಷಿತ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.

‘ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 29ರಂದು ಚಿತ್ರ ತೆರೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ನಟ ಯಶ್ ಹಾಗೂ ಪುನೀತ್ ರಾಜಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಶಿವರಾಜ್​ಕುಮಾರ್ ಯಶ್​​ರನ್ನು ಹಾಡಿಹೊಗಳಿದರು. ಇದರೊಂದಿಗೆ ಯಶ್ ಅವರ ವ್ಯಕ್ತಿತ್ವವನ್ನೂ ಹೊಗಳಿದ ಶಿವಣ್ಣ, ‘ಯಶ್​ಗೆ ಯಾವುದೇ ಜಂಬ ಇಲ್ಲ. ಒಳ್ಳೆತನ ಇದೆ. ಅವರು ಈಗ ಭಾರತ ಮಟ್ಟದಲ್ಲಿ ಜನಪ್ರಿಯ ಆಗಿರಬಹುದು. ಆದರೆ ಮೊದಲು ಹೇಗಿದ್ದರೋ ಹಾಗೇ ಇದ್ದಾರೆ’ ಎಂದಿದ್ದಾರೆ. ಇದೇ ವೇಳೆ ಅವರು ಯಶ್ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಒಳ್ಳೆಯ ಧನಾತ್ಮಕ ವ್ಯಕ್ತಿತ್ವ ಇರುವ ವ್ಯಕ್ತಿ ಯಶ್ ಎಂದಿದ್ದಾರೆ ಶಿವಣ್ಣ.

‘ಭಜರಂಗಿ 2’ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದು, ಶಿವರಾಜಕುಮಾರ್ ಹಾಗೂ ಎ.ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಚಿಯತ್ರಕ್ಕಿದೆ. ಅಕ್ಟೋಬರ್ 29ರಂದು ಸುಮಾರು 1,000 ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಗಾಂಧಿನಗರ ಅಂಗಳದಿಂದ ಕೇಳಿಬಂದಿದೆ.

ಇದನ್ನೂ ಓದಿ: 

ತೆರಿಗೆ ವಿನಾಯ್ತಿ ಕೇಸ್​ನಲ್ಲಿ ನ್ಯಾಯಾಲಯದ ಕಟು ಟೀಕೆಯಿಂದ ಮನನೊಂದ ವಿಜಯ್; ಹೈಕೋರ್ಟ್​ ಮೊರೆ ಹೋದ ನಟ

‘ಶಿವರಾಜ್​ಕುಮಾರ್​ ಮತ್ತು ಹರ್ಷ ಕಾಂಬಿನೇಷನ್​ ಹ್ಯಾಟ್ರಿಕ್​ ಬಾರಿಸುತ್ತೆ’