‘ಘೋಸ್ಟ್’ಸಿನಿಮಾದಲ್ಲಿ ಮಿಸ್ ಆಗಿದ್ದು ‘ಕರಟಕ ಧಮನಕ’ನಲ್ಲಿ ಸಿಗಲಿದೆ: ಶಿವಣ್ಣ
Shiva Rajkumar: ‘ಘೋಸ್ಟ್’ ಸಿನಿಮಾ ನೋಡಿದವರು ಎಲ್ಲ ಸರಿ ಆದರೆ ಶಿವಣ್ಣನಂಥಹಾ ಒಳ್ಳೆಯ ಡ್ಯಾನ್ಸರ್ ಅನ್ನು ಇಟ್ಟುಕೊಂಡು ಅವರಿಗೆ ಒಂದೊಳ್ಳೆ ಡ್ಯಾನ್ಸ್ ಹಾಡು ಇಟ್ಟಿಲ್ಲ ಎಂದಿದ್ದಾರೆ. ಆದರೆ ಇದಕ್ಕೆ ಉತ್ತರಿಸಿರುವ ಶಿವಣ್ಣ, 'ಘೋಸ್ಟ್'ನಲ್ಲಿ ಮಿಸ್ ಆಗಿದ್ದ'ಕರಟಕ ಧಮನಕ' ಸಿನಿಮಾನಲ್ಲಿ ಸಿಗಲಿದೆ ಎಂದಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಘೋಸ್ಟ್’ ಸಿನಿಮಾ ಇದೇ ವಾರ ಬಿಡುಗಡೆ ಆಗಿ ಸೂಪರ್ ಹಿಟ್ ಆಗುವ ಹಾದಿಯಲ್ಲಿದೆ. ಸಿನಿಮಾದ ನೋಡಿರುವ ಹಲವು ಶಿವಣ್ಣನ ಮಾಸ್ ಅವತಾರ, ಖಡಕ್ ಲುಕ್, ಗುಂಡು ಹೊಡೆದಂಥಹಾ ಡೈಲಾಗ್ಗಳನ್ನು ಇಷ್ಟಪಟ್ಟಿದ್ದಾರೆ. ಆದರೆ ಕೆಲವರು ಮಾತ್ರ ಶಿವರಾಜ್ ಕುಮಾರ್ ಅವರ ಡ್ಯಾನ್ಸ್ ಅನ್ನು ಮಿಸ್ ಮಾಡಿಕೊಂಡಿದ್ದಾರೆ. ಒಳ್ಳೆಯ ಡ್ಯಾನ್ಸರ್ ಆಗಿರುವ ಶಿವಣ್ಣನಿಗೆ ಒಂದೊಳ್ಳೆ ಡ್ಯಾನ್ಸ್ ನಂಬರ್ ಅನ್ನು ಸಿನಿಮಾದಲ್ಲಿ ಇಡಬಹುದಿತ್ತು ಎಂದಿದ್ದಾರೆ ಕೆಲವರು. ಇದಕ್ಕೆ ಉತ್ತರಿಸಿರುವ ಶಿವಣ್ಣ, ‘ಕರಟಕ ಧಮನಕ’ ಸಿನಿಮಾನಲ್ಲಿ ಬಹಳ ಡ್ಯಾನ್ಸ್ ಇದೆ. ಇಲ್ಲಿ ಮಿಸ್ ಆಗಿದ್ದು ಅಲ್ಲಿ ಸಿಗಲಿದೆ. ಅಲ್ಲದೆ ಈಗಿನ ಡ್ಯಾನ್ಸ್ ಮಾದರಿ ಬೇರೆ ರೀತಿ ಇದೆ. ಅದನ್ನು ಕಲಿತು ಚೆನ್ನಾಗಿ ಡ್ಯಾನ್ಸ್ ಮಾಡಿದಾಗಲಷ್ಟೆ ಅಭಿಮಾನಿಗಳು, ಜನ ಒಪ್ಪಿಕೊಳ್ಳುತ್ತಾರೆ. ‘ಕರಟಕ ಧಮನಕ’ ಸಿನಿಮಾನಲ್ಲಿ ಸಾಕಷ್ಟು ಡ್ಯಾನ್ಸ್ ಮಾಡಿದ್ದೀನಿ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos