ವಿನೋದ್ ರಾಜ್ ಜೊತೆಗಿನ ತಮ್ಮ ಬಂಧದ ಬಗ್ಗೆ ಶಿವಣ್ಣ ಮಾತು
Shiva Rajkumar: ಶಿವರಾಜ್ ಕುಮಾರ್ ಶಿವರಾಜ್ ಕುಮಾರ್ ಇಂದು (ನವೆಂಬರ್ 28) ವಿನೋದ್ ರಾಜ್ರ ನೆಲಮಂಗಳದ ಸೋಲದೇವನಹಳ್ಳಿ ನಿವಾಸಕ್ಕೆ ಭೇಟಿ ನೀಡಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ವಿನೋದ್ ರಾಜ್ ನಡುವಿನ ಬಾಂಧವ್ಯದ ಬಗ್ಗೆಯೂ ಮಾತನಾಡಿದರು.
ಶಿವರಾಜ್ ಕುಮಾರ್ (Shiva Rajkumar) ಇಂದು (ನವೆಂಬರ್ 28) ವಿನೋದ್ ರಾಜ್ರ ನೆಲಮಂಗಳದ ಸೋಲದೇವನಹಳ್ಳಿ ನಿವಾಸಕ್ಕೆ ಭೇಟಿ ನೀಡಿ, ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ವಿನೋದ್ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದರು. ಲೀಲಾವತಿ ಅಮ್ಮನವರ ಮೇಲೆ ದೇವರ ಆಶೀರ್ವಾದದ ಜೊತೆಗೆ ಮಗನ ಪ್ರೀತಿಯೂ ಇದೆ, ಅವರು ಇನ್ನೂ ಹಲವು ಕಾಲ ನಮ್ಮೊಡನೆ ಇರಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ವಿನೋದ್ ರಾಜ್ ಜೊತೆಗಿನ ತಮ್ಮ ಬಂಧ ಎಷ್ಟು ಗಟ್ಟಿಯಾದದ್ದು ಎಂಬ ಬಗ್ಗೆಯೂ ಶಿವಣ್ಣ ಮಾತನಾಡಿದರು. ನನ್ನ ಹಾಗೂ ಅವರ ಸ್ನೇಹದ ಬಗ್ಗೆ ನಮ್ಮಿಬ್ಬರಿಗೆ ಮಾತ್ರವೇ ಗೊತ್ತು ಎಂದು ಸಹ ಶಿವಣ್ಣ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 28, 2023 11:13 PM
Latest Videos