ಸಿದ್ಧತೆಗಳ ಪರಿಶೀಲನೆಗೆ ನಾನು ಮತ್ತು ಶಿವಕುಮಾರ್ ನಾಳೆ ವಿಜಯನಗರಕ್ಕೆ ಹೋಗುತ್ತಿದ್ದೇವೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: May 15, 2025 | 6:34 PM

ಮಂಡಿನೋವಿನ ಸಮಸ್ಯೆಯಿಂದ ಬಳಲಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡಿಗೆ ಶೈಲಿ ಬದಲಾಗಿದೆ. ಮೊದಲಿನ ಹಾಗೆ ಅವರು ಠಾಕುಠೀಕಾಗಿ ನಡೆಯುತ್ತಿಲ್ಲ, ನಿಧಾನಕ್ಕೆ ನಡೆಯುತ್ತಿದ್ದಾರೆ. ಮೆಟ್ಟಿಲುಗಳನ್ನು ಇಳಿಯುವಾಗ ಹೆಚ್ಚಿನ ಜಾಗ್ರತೆ ವಹಿಸುತ್ತಿದ್ದಾರೆ. ವಿಧಾನ ಸೌಧದ ಬಳಿ ನಾಲ್ಕೈದು ಮೆಟ್ಟಿಲುಗಳನ್ನು ಅವರು ಇಳಿಯುವ ವಿಧಾನ ನೋಡಿದರೆ ವಿಷಯ ಗೊತ್ತಾಗುತ್ತದೆ.

ಬೆಂಗಳೂರು, ಮೇ 15: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಮೇ 20 ತನ್ನ ಆಧಿಕಾರದ 2ವರ್ಷಗಳನ್ನು ಪೂರೈಸಲಿದ್ದು ಇದೇ ಹಿನ್ನೆಲೆ ಹೊಸಪೇಟೆಯಲ್ಲಿ ಬೃಹತ್ ಸಾಧನಾ ಸಮಾವೇಶವನ್ನು ಏರ್ಪಡಿಸಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇಂದು ವಿಧಾನ ಸೌಧದಿಂದ ಹೊರಬರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಜಯನಗರಕ್ಕೆ ಭೇಟಿ ನೀಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ ಅವರು, ಹೌದು ನಾಳೆ ವಿಜಯನಗರಕ್ಕೆ ಹೋಗ್ತಾ ಇದ್ದೀನಿ, ಸಿದ್ಧತೆಗಳು ಹೇಗೆ ನಡೆದಿವೆ ಅಂತ ಪರಿಶೀಲನೆ ನಡೆಸಲು ಹೋಗುತ್ತಿರುವೆ, ಡಿಕೆ ಶಿವಕುಮಾರ್ ಸಹ ಬರುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:   ಅಧಿವೇಶನದಲ್ಲಿ ಭಾಗವಹಿಸಲು ವ್ಹೀಲ್ ಚೇರ್​​ನಲ್ಲಿ ಮಧ್ಯಾಹ್ನದ ವೇಳೆ ಅಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.