ಕಂಬಳ ಕ್ರೀಡೆಗೆ ಸಿದ್ಧತೆ ಭಾಗವಾಗಿ ನಡೆದ ಭೂಮಿಪೂಜೆಯಲ್ಲಿ ಶಿವಕುಮಾರ್, ಅಶ್ವಥ್ ನಾರಾಯಣ, ಸದಾನಂದಗೌಡ ಜೊತೆಯಾದರು!
ಮುಂದಿನ ತಿಂಗಳು 25 ಮತ್ತು 26 ರಂದು ನಗರದ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ ಮಾರಾಯ್ರೇ. ಅದಕ್ಕಾಗಿ ಸಿದ್ಧತೆಗಳು ಆರಂಭಗೊಂಡಿದ್ದು ಅರಮನೆ ಮೈದಾನದಲ್ಲಿಂದು ಭೂಮಿ ಪೂಜೆ ನೆರವೇರಿಸಲಾಯಿತು. ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಂಬಳವನ್ನು ಬೆಂಗಳೂರುನಂಥ ಕಾಸ್ಮೊಪಾಲಿಟನ್ ನಗರಕ್ಕೆ ತರುತ್ತಿರೋದು ಒಂದು ಹೆಮ್ಮೆಯ ಮತ್ತು ಸ್ವಾಗತಾರ್ಹ ಬೆಳವಣಿಗೆ.
ಬೆಂಗಳೂರು: ಸಾರ್ವಜನಿಕ ಕಾರ್ಯಕ್ರಮಗಳು, ಉತ್ಸವಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಧುರೀಣನ್ನು ಒಂದುಗೂಡಿಸುತ್ತವೆ. ಈ ವಿದ್ಯಮಾನವನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ನಿಮಗೆ ನೆನಪಿರಬಹುದು ಕರಾವಳಿ ಪ್ರದೇಶದ ಐಕಾನಿಕ್ ಜಾನಪದ ಕ್ರೀಡೆ ಕಂಬಳವನ್ನು (Kambala Sport) ಬೆಂಗಳೂರಲ್ಲಿ ಆಯೋಜಿಸಲಾಗುವ ಬಗ್ಗೆ ನಾವು ವರದಿ ಮಾಡಿದ್ದೆವು. ಕಂಬಳ ಬೆಂಗಳೂರಲ್ಲಾ? ಅಂತ ಹಲವಾರು ಜನ ಹುಬ್ಬೇರಿಸಿದುಂಟು. ಮುಂದಿನ ತಿಂಗಳು 25 ಮತ್ತು 26 ರಂದು ನಗರದ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ ಮಾರಾಯ್ರೇ. ಅದಕ್ಕಾಗಿ ಸಿದ್ಧತೆಗಳು ಆರಂಭಗೊಂಡಿದ್ದು ಅರಮನೆ ಮೈದಾನದಲ್ಲಿಂದು ಭೂಮಿ ಪೂಜೆ ನೆರವೇರಿಸಲಾಯಿತು. ಭೂಮಿಪೂಜೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ (DV Sadananda Gowda), ಮಾಜಿ ಸಚಿವ ಹಾಗೂ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan), ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮೊದಲಾದವರು ಪಾಲ್ಗೊಂಡಿದ್ದರು. ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕಂಬಳವನ್ನು ಬೆಂಗಳೂರುನಂಥ ಕಾಸ್ಮೊಪಾಲಿಟನ್ ನಗರಕ್ಕೆ ತರುತ್ತಿರೋದು ಒಂದು ಹೆಮ್ಮೆಯ ಮತ್ತು ಸ್ವಾಗತಾರ್ಹ ಬೆಳವಣಿಗೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ