ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅದೇನು ಹೇಳಿದರು ಅಂತ ಡಿಕೆ ಶಿವಕುಮಾರ್ ನಕ್ಕರು?

ಸಿದ್ದರಾಮಯ್ಯ ಹೊರಡಲು ಅಣಿಯಾದಾಗ ಶಿವಕುಮಾರ್ ಕಾರ್ಯಕರ್ತರಿಗೆ ಏನೂ ಹೇಳಲೇ ಇಲ್ಲವಲ್ಲ ಅನ್ನುತ್ತಾ ಅವರು ಕೈ ಹಿಡಿದು ಕೂರಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸಿದ್ದರಾಮಯ್ಯ ನೀವು ಅಧ್ಯಕ್ಷರಾಗಿದ್ದೀರಿ, ನೀವೇ ಹೇಳಬೇಕು ಅಂದಾಗ ಇಬ್ಬರೂ ನಗುತ್ತಾರೆ. ನಂತರ ಇಬ್ಬರ ನಡುವೆ ಆತ್ಮೀಯವಾಗಿ ಒಂದಷ್ಟು ಮಾತುಕತೆ ನಡೆದ ಮೇಲೆ ಸಿದ್ದರಾಮಯ್ಯ ಅಲ್ಲಿಂದ ಹೊರಡುತ್ತಾರೆ.

ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅದೇನು ಹೇಳಿದರು ಅಂತ ಡಿಕೆ ಶಿವಕುಮಾರ್ ನಕ್ಕರು?
|

Updated on: Oct 02, 2023 | 2:25 PM

ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿ (Mahatma Gandhi) ಮತ್ತು ಭಾರತದ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ  (Lal Bahadur Shastri) ಅವರ ಜನ್ಮ ವಾರ್ಷಿಕೋತ್ಸವಗಳ ಅಂಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ನಾಯಕರಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar), ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಿಕೆ ಸುರೇಶ್ ಮೊದಲಾದವರೊಂದಿಗೆ ಸಚಿವರು, ಶಾಸಕರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ; ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಅವರಿಗೆ ಸಚಿವ ಸಂಪುಟ ಮತ್ತು ಎಲ್ಲ ಕಾರ್ಯಕರ್ತರ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಹೇಳಿ ಹೊರಡಲು ಅಣಿಯಾದಾಗ ಶಿವಕುಮಾರ್ ಕಾರ್ಯಕರ್ತರಿಗೆ ಏನೂ ಹೇಳಲೇ ಇಲ್ಲವಲ್ಲ ಅನ್ನುತ್ತಾ ಅವರು ಕೈ ಹಿಡಿದು ಕೂರಿಸಲು ಪ್ರಯತ್ನಿಸುತ್ತಾರೆ. ಅದಕ್ಕೆ ಸಿದ್ದರಾಮಯ್ಯ ನೀವು ಅಧ್ಯಕ್ಷರಾಗಿದ್ದೀರಿ, ನೀವೇ ಹೇಳಬೇಕು ಅಂದಾಗ ಇಬ್ಬರೂ ನಗುತ್ತಾರೆ. ನಂತರ ಇಬ್ಬರ ನಡುವೆ ಆತ್ಮೀಯವಾಗಿ ಒಂದಷ್ಟು ಮಾತುಕತೆ ನಡೆದ ಮೇಲೆ ಸಿದ್ದರಾಮಯ್ಯ ಅಲ್ಲಿಂದ ಹೊರಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us