ಎಸ್​ಎಂ ಕೃಷ್ಣ ಜೊತೆಗಿನ ದೊಡ್ಡ ಗಲಾಟೆ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಎಸ್.ಎಂ.ಕೃಷ್ಣ ಅವರು ತಮ್ಮ ಸಚಿವ ಸಂಪುಟದಿಂದ ನನ್ನನ್ನೇ ಕೈಬಿಟ್ಟಿದ್ದರು. ಆಮೇಲೆ ಜಗಳ ಮಾಡಿ ನಾನು ಅವರ ಸಚಿವ ಸಂಪುಟಕ್ಕೆ ಸೇರಿಕೊಂಡೆ. ಧರ್ಮರಾಯನ ಧರ್ಮತ್ವ, ಅರ್ಜುನನ ಗುರಿ, ಕರ್ಣನ ದಾನತ್ವ ಮತ್ತು ಕೃಷ್ಣನ ತಂತ್ರಗಾರಿಕೆ ಎಲ್ಲವೂ ಎಸ್ಎಂ ಕೃಷ್ಣ ಅವರ ಬಳಿ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹಾಡಿಹೊಗಳಿದರು.

ಎಸ್​ಎಂ ಕೃಷ್ಣ ಜೊತೆಗಿನ ದೊಡ್ಡ ಗಲಾಟೆ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್​
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: Oct 01, 2023 | 3:16 PM

ಬೆಂಗಳೂರು ಅ.01: ಚಿತ್ರಕಲಾ ಪರಿಷತ್​​ನಲ್ಲಿ ರವಿವಾರ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ (SM Krishna) ಅವರ ಜೀವನಗಾಥೆ ಆಧಾರಿತ “ನೆಲದ ಸಿರಿ ಕೃತಿ” ಪುಸ್ತಕ ಬಿಡುಗಡೆ ಮಾಡಲಾಯಿತು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಮತ್ತು ಎಸ್​ಎಂ ಕೃಷ್ಣ ಅವರ ಒಡನಾಟ, ರಾಜಕೀಯ ಹಾದಿ ಬಗ್ಗೆ ಮೆಲುಕು ಹಾಕಿದರು. “ಎಸ್​ಎಂ ಕೃಷ್ಣ ಮತ್ತು ನನ್ನ ಕೃಷ್ಣ ಅವರ ಒಡನಾಟ 35 ವರ್ಷಗಳದ್ದು. ಎಸ್​​.ಎಂ ಕೃಷ್ಣ ಅವರು ಕಷ್ಟದ ಕಾಲದಲ್ಲಿ ಅಧಿಕಾರ ಹಿಡಿದರು. ಬರ, ಕಾವೇರಿ ವಿವಾದ, ರಾಜ್ ಕುಮಾರ್ ಅಪಹರಣ ಮತ್ತು ಆರ್ಥಿಕ ಸಂಕಷ್ಟ ಕಾಲದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿದರು. ಇದೆಲ್ಲವನ್ನೂ ಮೆಟ್ಟಿ ನಿಂತು ಎಸ್ ಎಂ ಕೃಷ್ಣ ಅವರ ಕಾಲ ಅಂತ ಹೆಸರು ಮಾಡಿದರು” ಎಂದು ಹೇಳಿದರು.

ಅವಧಿ ಪೂರ್ವ ಚುನಾವಣೆ ವಿಚಾರವಾಗಿ ನನಗೂ ಮತ್ತು ಎಸ್ಎಂ ಕೃಷ್ಣ ಅವರಿಗೂ ದೊಡ್ಡ ಜಗಳ ಗಲಾಟೆ ಆಗಿತ್ತು. ಈಗ ಬರಗಾಲ ಇದೆ, ನಿಮ್ಮ ಜಾತಕವೂ ಸರಿಯಿಲ್ಲ. ಹೀಗಾಗಿ ಅವಧಿಪೂರ್ವ ಚುನಾವಣೆ ಹೋಗೋದು ಬೇಡ ಅಂತ ನಾನು ಗಲಾಟೆ ಮಾಡಿದೆ. ಆದರೂ ಎಸ್​ಎಂ ಕೃಷ್ಣ ಅವರು ಕೇಳಲಿಲ್ಲ. 132 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತ ಲೆಕ್ಕಾಚಾರ ಹಾಕಿದ್ದರು. ನಾನು ಅಷ್ಟು ಬರಲ್ಲ 72 ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಅಂತ ಗಲಾಟೆ ಮಾಡಿದ್ದೆ. ಆದರೂ ಅವರು ನಿರ್ಧಾರ ಮಾಡಿಬಿಟ್ಡಿದ್ದೇನೆ ಅಂತ ಅವಧಿ ಪೂರ್ವ ಚುನಾವಣೆಗೆ ಹೋದರು, ದುರಾದೃಷ್ಟ ನಾವು ಸೋತೆವು ಎಂದು ಡಿಕೆ ಶಿವಕುಮಾರ್​ ನೆನಪು ಮಾಡಿಕೊಂಡರು.

ಎಸ್.ಎಂ.ಕೃಷ್ಣ ಅವರು ತಮ್ಮ ಸಚಿವ ಸಂಪುಟದಿಂದ ನನ್ನನ್ನೇ ಕೈಬಿಟ್ಟಿದ್ದರು. ಆಮೇಲೆ ಜಗಳ ಮಾಡಿ ನಾನು ಅವರ ಸಚಿವ ಸಂಪುಟಕ್ಕೆ ಸೇರಿಕೊಂಡೆ. ಧರ್ಮರಾಯನ ಧರ್ಮತ್ವ, ಅರ್ಜುನನ ಗುರಿ, ಕರ್ಣನ ದಾನತ್ವ ಮತ್ತು ಕೃಷ್ಣನ ತಂತ್ರಗಾರಿಕೆ ಎಲ್ಲವೂ ಎಸ್ಎಂ ಕೃಷ್ಣ ಅವರ ಬಳಿ ಇದೆ ಎಂದು ಹಾಡಿಹೊಗಳಿದರು.

ಎಸ್​​.ಎಂ ಕೃಷ್ಣ ಅವರು ರಾಜ್ಯದ ಬಜೆಟ್​ ಅನ್ನು 34 ಸಾವಿರ ಕೋಟಿ ಹೆಚ್ಚಳ ಮಾಡಿದರು. ಇದರಿಂದ ಈಗ ನಾವು 3.5 ಲಕ್ಷ ಕೋಟಿ ರೂ. ಬಜೆಟ್​ ಮಂಡನೆ ಮಾಡಲು ಸಾಧ್ಯವಾಯಿತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೆ ಕಾರಣ. ಎಸ್​ ಎಂ ಕೃಷ್ಣ ಅವರು ಬೆಂಗಳೂರನ್ನು ಅಂತರಾಷ್ಟ್ರೀಯ ಮಾರ್ಕೆಟ್ ಮಾಡಿದರು. ಬೆಂಗಳೂರು ಸಿಲಿಕಾನ್ ವ್ಯಾಲಿ ಅಂತ ಹೆಸರು ಗಳಿಸಲು ಇವರೇ ಕಾರಣ. ಎಸ್​.ಎಮ್​ ಕೃಷ್ಣ ಅವರು ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣ ಮಾಡಿದರು ಎಂದು ತಿಳಿಸಿದರು.

ಇದನ್ನೂ ಓದಿ: Padma Awards 2023: ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪದ್ಮ ಪ್ರಶಸ್ತಿ ಪ್ರದಾನ; ಪದ್ಮ ವಿಭೂಷಣ ಸ್ವೀಕರಿಸಿದ ಎಸ್​ಎಂ ಕೃಷ್ಣ

ಎಸ್​.ಎಂ ಕೃಷ್ಣ ಅವರು ಮೆಟ್ರೋ ಬಗ್ಗೆ ಅಧ್ಯಯನ ಮಾಡಲು ದೆಹಲಿಗೆ ನಮ್ಮನ್ನು ಕಳುಹಿಸಿದ್ದರು. ದೆಹಲಿಯಲ್ಲಿ ಮೆಟ್ರೋ ನೋಡಿದ ಬಳಿಕ ಮಾಜಿ ಸಂಸದ ಅನಂತ್ ಕುಮಾರ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದಿವಿ. ಎಸ್​ಎಂ ಕೃಷ್ಣ ಪ್ರಸ್ತಾಪದಿಂದಲೇ ಇವತ್ತು ನಮ್ಮ ಮೆಟ್ರೋ ಬಂದಿದೆ. ನಮ್ಮ ಮೆಟ್ರೋ ರಾಜ್ಯಕ್ಕೆ ಬಂದಿದ್ದರೇ ಎಸ್​ಎಂ ಕೃಷ್ಣ ಕಾರಣ ಎಂದರು.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಡದಿಗೆ ತೆಗೆದುಕೊಂಡು ಹೋಗಬೇಕು ಅಂತ ಬಹಳ ಜನ ಪ್ರಯತ್ನಪಟ್ಟರು. ಎಸ್​ಎಂ ಕೃಷ್ಣ ಏನು ಮೋಡಿ ಮಾಡಿದರೋ ಏನೋ 4200 ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ನೀಡಲಾಯಿತು. ಇಡೀ ದೇಶದಲ್ಲಿ ಬಿಸಿಯೂಟ ಕಾರ್ಯಕ್ರಮ ಚಿಂತನೆ ನಡೆದಿದ್ದರೆ ಅದು ಎಸ್​ ಎಂ ಕೃಷ್ಣ ಅವರಿಂದಾಗಿ. ಹೆಣ್ಣು ಮಕ್ಕಳ ಸಾಬಲ್ಯಕ್ಕೆ ಸ್ತ್ರೀ ಶಕ್ತಿ ಕಾರ್ಯಕ್ರಮ ತಂದರು. ಮೊದಲ ಗ್ಲೋಬಲ್ ಇನವೆಸ್ಟರ್ಸ್ ಮೀಟ್ ಮಾಡಿದ್ದು ಎಸ್​ಎಂ ಕೃಷ್ಣ ಕಾಲದಲ್ಲೇ. ಎಲ್ಲ ವರ್ಗಕ್ಕೆ ಭೂಮಿ ಯೋಜನೆಯಿಂದ ಅನುಕೂಲ ಆಗಿದೆ ಎಂದು ಹೇಳಿದರು.

ಬೆವರೇಜಸ್ ಕಾರ್ಪೋರೇಷನ್ ದೊಡ್ಡ ಐತಿಹಾಸಿಕ ತೀರ್ಮಾ‌ನ. ಬೆವರೇಜಸ್ ಕಾರ್ಪೋರೇಷನ್ ಮಾಡಿದ್ದರಿಂದ ಇವತ್ತು 3 ಲಕ್ಷ ಕೋಟಿ ಬಜೆಟ್ ಮಾಡಲು ಸಾಧ್ಯವಾಗುತ್ತಿದೆ. ದೇವರು ವರವನ್ನೂ ಕೊಡಲ್ಲ, ಶಾಪಾನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಅವಕಾಶ ಹೇಗೆ ಬಳಸಿಕೊಳ್ಳುತ್ತೀವಿ ಎನ್ನೋದು ಮಾತ್ರ ಮುಖ್ಯ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಶಾಸಕ ಡಾ.ಕೆ ಸುಧಾಕರ್, ಸಾಹಿತಿ ಹಂಪನಾಗರಾಜಯ್ಯ, ಬಿ.ಎಲ್ ಶಂಕರ್ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್