ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಯಿಸುತ್ತಿದ್ದೇನೆ: ಡಿಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪುವ ಯಾವುದೇ ವ್ಯಕ್ತಿಯ ಮನೆಗೆ ಹೋಗಿ ಆತ್ಮೀಯತೆಯಿಂದ ಅವನ ಕೈಹಿಡಿದು ಪಕ್ಷಕ್ಕೆ ಸೇರಿಸುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿಯವರು ತನಗೆ ನೀಡಿದ್ದಾರೆ ಮತ್ತು ಅದನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತಿರುವುದಾಗಿ ಶಿವಕುಮಾರ್ ಹೇಳಿದರು.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಮಾಜಿ ಜೆಡಿಎಸ್ ಶಾಸಕ ಎಂಸಿ ಅಶ್ವಥ್ (MC Ashwath) ಮತ್ತು ಹಲವಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿರೋಧ ಪಕ್ಷಗಳ ನಾಯಕರನ್ನು ಸೌಮ್ಯ ಮಾತುಗಳಿಂದಲೇ ತಿವಿದರು. ಜೆಡಿಎಸ್ ನಾಯಕರನ್ನು (JDS leaders) ವಿಶೇಷವಾಗಿ ಟಾರ್ಗೆಟ್ ಮಾಡಿ ಮಾತಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಮುಗ್ಧ ಮತದಾರರಿಗೆ ಯಾವ ಸಂದೇಶ ಹೋಗುತ್ತಿದೆ ಅಂತ ಅವರಿಗೆ ಅರ್ಥವಾಗುತ್ತಿಲ್ಲ ಎಂದರು. ಬೇರೆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ತಾವು ಗೌರವಿಸುತ್ತೇವೆ, ಆದರೆ ಅದನ್ನು ಅಪಾರ್ಥ ಮಾಡಿಕೊಂಡು ಡಿಕೆ ಶಿವಕುಮಾರ್ ನನ್ನು ಹೆದರಿಸುವ ಪ್ರಯತ್ನ ಬೇಡ, ಶಿವಕುಮಾರ್ ಯಾರಿಗೂ ಹೆದರುವವನಲ್ಲ ಎಂದು ಹೇಳಿದ ಅವರು ಚನ್ನಪಟ್ಟಣದ ಜೆಡಿಎಸ್ ನಾಯಕರು ಪಕ್ಷದ ಧುರೀಣರ ಮಾತುಗಳಿಗೆ ಹೆದರದೆ ಕಾಂಗ್ರೆಸ್ ಸೇರುತ್ತಿದ್ದಾರೆ ಅವರನ್ನು ಹಾರ್ದಿಕಾವಾಗಿ ಬರಮಾಡಿಕೊಳ್ಳುತ್ತಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪುವ ಯಾವುದೇ ವ್ಯಕ್ತಿಯ ಮನೆಗೆ ಹೋಗಿ ಆತ್ಮೀಯತೆಯಿಂದ ಅವನ ಕೈಹಿಡಿದು ಪಕ್ಷಕ್ಕೆ ಸೇರಿಸುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿಯವರು ತನಗೆ ನೀಡಿದ್ದಾರೆ ಮತ್ತು ಅದನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತಿರುವುದಾಗಿ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ