AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಕುಮಾರ್ ಒಬ್ಬ ತಲೆತಿರುಕ, ಕ್ಷುಲ್ಲಕ ಕಾರಣಗಳಿಂದ ಮುಸ್ಲಿಮರ ಮನವೊಲಿಸುವ ಪ್ರಯತ್ನ ಮಾಡುತ್ತಾನೆ: ಬಿಎಸ್ ಯಡಿಯೂರಪ್ಪ

ಶಿವಕುಮಾರ್ ಒಬ್ಬ ತಲೆತಿರುಕ, ಕ್ಷುಲ್ಲಕ ಕಾರಣಗಳಿಂದ ಮುಸ್ಲಿಮರ ಮನವೊಲಿಸುವ ಪ್ರಯತ್ನ ಮಾಡುತ್ತಾನೆ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 22, 2024 | 2:09 PM

ಬಿಜೆಪಿ ಯಾವತ್ತೂ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಅಂತ ಭೇದಭಾವ ಮಾಡಲ್ಲ, ತಮಗೆ ಎಲ್ಲರೂ ಒಂದೇ ಎಂದು ಹೇಳಿದರು. ಲೋಕಸಭಾ ಚುನಾವಣೆ ಬಗ್ಗೆ ಮಾತಾಡಿದ ಅವರು, ಎಲ್ಲೆಡೆ ಮೋದಿ ಅಲೆ ಇದೆ, ಹಾಸನದಲ್ಲಿ ಪ್ರಜ್ವಲ್ ಕನಿಷ್ಟ 2 ಲಕ್ಷ ವೋಟುಗಳ ಅಂತರದಿಂದ ಗೆಲ್ಲಲಿದ್ದಾರೆ ಮತ್ತು ರಾಜ್ಯದಲ್ಲಿ ಬಿಜೆಪಿ ಎಲ್ಲ 28 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದರು.

ಹಾಸನ: ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಪರ ಪ್ರಚಾರ ಮಾಡಲು ನಗರಕ್ಕೆ ಆಗಮಿಸಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರು (BS Yediyurappa) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರನ್ನು (DK Shivakumar) ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡು ಆಶ್ಚರ್ಯ ಮೂಡಿಸಿದರು. ಸಾಮಾನ್ಯವಾಗಿ ಟೀಕಿಸುವಾಗಲೂ ಅವರು ಸಭ್ಯವಾಗೇ ಮಾತಾಡುತ್ತಾರೆ. ಆದರೆ, ಶಿವಕುಮಾರ್ ಅವರು; ಬಿಜೆಪಿ ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡುತ್ತಿದೆ, ಅವರ ಬದುಕನ್ನು ಅಸಹನೀಯಗೊಳಿಸುತ್ತಿದೆ ಎಂದು ಹೇಳಿರುವುದನ್ನು ಅವರ ಗಮನಕ್ಕೆ ತಂದಗ ಕೆರಳಿದ ಯಡಿಯೂರಪ್ಪ, ಅವನೊಬ್ಬ ತಲೆತಿರುಕ, ಅವನ ಮಾತನ್ನು ನಂಬುವ ಅವಶ್ಯಕತೆಯಿಲ್ಲ, ಕ್ಷುಲ್ಲಕ ಕಾರಣಗಳನ್ನು ಹೇಳಿ ಮುಸಲ್ಮಾನರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾನೆ. ಬಿಜೆಪಿ ಯಾವತ್ತೂ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಅಂತ ಭೇದಭಾವ ಮಾಡಲ್ಲ, ತಮಗೆ ಎಲ್ಲರೂ ಒಂದೇ ಎಂದು ಹೇಳಿದರು. ಲೋಕಸಭಾ ಚುನಾವಣೆ ಬಗ್ಗೆ ಮಾತಾಡಿದ ಅವರು, ಎಲ್ಲೆಡೆ ಮೋದಿ ಅಲೆ ಇದೆ, ಹಾಸನದಲ್ಲಿ ಪ್ರಜ್ವಲ್ ಕನಿಷ್ಟ 2 ಲಕ್ಷ ವೋಟುಗಳ ಅಂತರದಿಂದ ಗೆಲ್ಲಲಿದ್ದಾರೆ ಮತ್ತು ರಾಜ್ಯದಲ್ಲಿ ಬಿಜೆಪಿ ಎಲ್ಲ 28 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ: ಕೆಎಸ್ ಈಶ್ವರಪ್ಪ