ಮುನಿರತ್ನ ಕೈಕುಲುಕಲು ಮುಂದಾದಾಗ ಶಿವಕುಮಾರ ನಿರಾಕರಿಸಿ ಸಚಿವರ ಬೆನ್ನು ತಟ್ಟಿದರು

ಶನಿವಾರ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರು ಮುಖಾಮುಖಿಯಾದಾಗ ಮುನಿರತ್ನ ಕೈ ಕುಲುಕಲು ಕೈ ಚಾಚಿದಾಗ ಶಿವಕುಮಾರ ಹಾಗೆ ಮಾಡುವುದನ್ನು ನಿರಾಕರಿಸಿ ಅವರ ಬೆನ್ನು ಚಪ್ಪರಿಸಿ ಮುಗುಳ್ನಗುತ್ತಾ ಮುಂದೆ ನಡೆಯುತ್ತಾರೆ

TV9kannada Web Team

| Edited By: TV9 SEO

Jul 18, 2022 | 2:51 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಸಚಿವ ಮುನಿರತ್ನ (Munirathna Naidu) ಹಿಂದೆ ಒಂದೇ ಪಕ್ಷದಲ್ಲಿದ್ದವರು ಮತ್ತು ಆಪ್ತರು. ನಂತರದ ದಿನಗಳಲ್ಲಿ ಮುನಿರತ್ನ ಬಿಜೆಪಿ (BJP) ಸೇರಿ ಮಂತ್ರಿಯಾಗಿದ್ದು ಈಗ ಇತಿಹಾಸ. ಶನಿವಾರ ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಇವರಿಬ್ಬರು ಮುಖಾಮುಖಿಯಾದಾಗ ಮುನಿರತ್ನ ಕೈ ಕುಲುಕಲು ಕೈ ಚಾಚಿದಾಗ ಶಿವಕುಮಾರ ಹಾಗೆ ಮಾಡುವುದನ್ನು ನಿರಾಕರಿಸಿ ಅವರ ಬೆನ್ನು ಚಪ್ಪರಿಸಿ ಮುಗುಳ್ನಗುತ್ತಾ ಮುಂದೆ ನಡೆಯುತ್ತಾರೆ. ಮುನಿರತ್ನ ಪೆಚ್ಚಾದರೂ ಸಾವರಿಸಿಕೊಂಡು ದೇಶಾವರಿ ನಗೆ ಬೀರುತ್ತಾರೆ.

Follow us on

Click on your DTH Provider to Add TV9 Kannada