Karnataka Assembly Polls: ಶಿವಲಿಂಗಗೌಡ ಜೆಡಿಎಸ್ ಸಾಕಿದ ಮುದ್ದಿನ ಗಿಣಿ, ಈಗ ಬೇರೆಡೆ ಮೇಯಲು ಹೋಗಿದ್ದಾರೆ: ಹೆಚ್ ಡಿ ರೇವಣ್ಣ

Karnataka Assembly Polls: ಶಿವಲಿಂಗಗೌಡ ಜೆಡಿಎಸ್ ಸಾಕಿದ ಮುದ್ದಿನ ಗಿಣಿ, ಈಗ ಬೇರೆಡೆ ಮೇಯಲು ಹೋಗಿದ್ದಾರೆ: ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on:May 08, 2023 | 11:13 AM

ಪಕ್ಷ ನೀಡಿದ ಎಲ್ಲ ಸವಲತ್ತುಗಳನ್ನು ಅನುಭವಿಸಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂದು ರೇವಣ್ಣ ಹೇಳಿದರು.

ಹಾಸನ: ಮತದಾನಕ್ಕೆ ಕೇವಲ ಎರಡು ದಿನ ಮಾತ್ರ ಉಳಿದಿದ್ದರೂ ಜೆಡಿಎಸ್ ಪಕ್ಷದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರು ಪಕ್ಷ ತೊರೆದು ಅರಸೀಕೆರೆ ಕ್ಷೇತ್ರದಿಂದ (Arasikere constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಎಂ ಶಿವಲಿಂಗೇಗೌಡರ (KM Shivalinge Gowda) ವಿರುದ್ಧ ಕಿಡಿಕಾರುವುದನ್ನು ನಿಲ್ಲಿಸಿಲ್ಲ. ಹಾಸನದಲ್ಲಿ ಸೋಮವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೇವಣ್ಚ, ಶಿವಲಿಂಗೇಗೌಡರು ನಾವು ಸಾಕಿದ ಮುದ್ದಿನ ಗಿಣಿ, ಜೆಡಿಎಸ್ ನಲ್ಲಿ ಮೇವು ಕಡಿಮೆಯಾಗಿದೆ ಅಂತ ಬೇರೆಡೆ ಮೇಯಲು ಹೋಗಿದ್ದಾರೆ. ಪಕ್ಷ ನೀಡಿದ ಎಲ್ಲ ಸವಲತ್ತುಗಳನ್ನು ಅನುಭವಿಸಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂದು ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 08, 2023 10:57 AM