Karnataka Assembly Polls: ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸುವಾಗಲೂ ಅಧಿಕಾರಿಗಳೊಂದಿಗೆ ಹೆಚ್ ಡಿ ರೇವಣ್ಣ ಕಿರಿಕ್!

Karnataka Assembly Polls: ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸುವಾಗಲೂ ಅಧಿಕಾರಿಗಳೊಂದಿಗೆ ಹೆಚ್ ಡಿ ರೇವಣ್ಣ ಕಿರಿಕ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2023 | 1:17 PM

ನಾಮಪತ್ರ ಸಲ್ಲಿಸುವಾಗ ಮಾಧ್ಯಮದವರನ್ನು ಕಚೇರಿಯೊಳಗೆ ಬಿಡದ ಕಾರಣ ರೇವಣ್ಣ ಸಿಟ್ಟಿಗೆದ್ದರು.

ಹಾಸನ: ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣಗೂ (HD Revanna) ಮತ್ತು ಅಧಿಕಾರಿಗಳಿಗೂ ಅಂದಕಾಲತ್ತಿಲ್ ಎಣ್ಣೆ-ಸೀಗೇಕಾಯಿ ಸಂಬಂಧ. ಇವತ್ತು ಅವರು ಪತ್ನಿ ಭವಾನಿ ರೇವಣ್ಣ (Bhavani Revanna), ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್ ಜೊತೆ ನಾಮಪತ್ರ ಸಲ್ಲಿಸಲು (nomination filing) ಹೋದಾಗಲೂ ಅವರ ವರ್ತನೆಯ ಪುನರಾವರ್ತನೆಯಾಯಿತು. ನಾಮಪತ್ರ ಸಲ್ಲಿಸುವಾಗ ಮಾಧ್ಯಮದವರನ್ನು ಕಚೇರಿಯೊಳಗೆ ಬಿಡದ ಕಾರಣ ರೇವಣ್ಣ ಸಿಟ್ಟಿಗೆದ್ದರು. ಪ್ರಜ್ವಲ್ ರೇವಣ್ಣ ಕೂಡ ಪೋನಲ್ಲಿ ಯಾವುದೋ ಅಧಿಕಾರಿಯೊಂದಿಗೆ ಮಾತಾಡುವಾಗ ಪರಿಸ್ಥಿತಿ ವಿವರಿಸಿದರು. ಅಧಿಕಾರಿಗಳು ಪ್ರಜ್ವಲ್, ಭವಾನಿ, ಮತ್ತು ರೇವಣ್ಣರಿಗೆ ನಿಯಮ ವಿವರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ