ಅಂಬಾರಿ ಹೊತ್ತ ಆನೆಯ ರಂಪಾಟ: ಜಿಲ್ಲಾಡಳಿತದ ಆ ಒಂದು ಎಡವಟ್ಟಿನಿಂದ ಈ ಅವಘಡ
ಶಿವಮೊಗ್ಗ ನಗರದಲ್ಲಿ ದಸರಾ ಜಂಬೂಸವಾರಿ ವೇಳೆ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದೆ. ಇದರಿಂದ ಕಂಗಾಲಾದ ಜನ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂ ಸವಾರಿ ಆರಂಭವಾಗಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡಿದೆ. ಆನೆಯ ಆರ್ಭಟಕ್ಕೆ ಕಾರುಗಳು ಜಖಂ ಆಗಿವೆ. ಅಂಬಾರಿ ಜಾರಿ ಬಿದ್ದ ಕಾರಣ ಅಂಬಾರಿಗೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಶಿವಮೊಗ್ಗ, ಅಕ್ಟೋಬರ್ 21: ಶಿವಮೊಗ್ಗ ನಗರದಲ್ಲಿ ದಸರಾ ಜಂಬೂಸವಾರಿ ವೇಳೆ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದೆ. ಇದರಿಂದ ಕಂಗಾಲಾದ ಜನ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂ ಸವಾರಿ ಆರಂಭವಾಗಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡಿದೆ. ಆನೆಯ ಆರ್ಭಟಕ್ಕೆ ಕಾರುಗಳು ಜಖಂ ಆಗಿವೆ. ಅಂಬಾರಿ ಜಾರಿ ಬಿದ್ದ ಕಾರಣ ಅಂಬಾರಿಗೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಮೊದಲು ದಸರಾ ಅಂಬಾರಿ ಹೊರಲು ಸಾಗರ್ ಆನೆಗೆ ತರಬೇತಿ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಗರ್ ಆನೆಗೆ ಕಾಲು ನೋವಿನ ಕಾರಣದಿಂದ ಸೋಮಣ್ಣ ಆನೆಗೆ ಮೊದಲ ಬಾರಿಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿದೆ. ಇದರಿಂದ ಆನೆಗೆ ತಾಲೀಮು ಸರಿಯಾಗದ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
