ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟಿ ಆಳುದ್ದದ ಚಲನ್ ಪಡೆದ ವಾಹನ ಸವಾರರು
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಪಾವತಿಗೆ ಸರ್ಕಾರ ಕೊಟ್ಟಿರುವ ಶೇ 50 ರಿಯಾಯಿತಿ ದರದ ಅವಕಾಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಶೇ 50 ರ ರಿಯಾಯಿತಿಯಲ್ಲಿ ದಂಡ ಪಾವತಿಗೆ ಸೆ. 12 ಕೊನೆಯ ದಿನವಾಗಿದ್ದರಿಂದ ಶಿವಮೊಗ್ಗದಲ್ಲಿ ವಾಹನ ಸವಾರರು ಮುಗಿಬಿದ್ದು ಟ್ರಾಫಿಕ್ ಫೈನ್ ಕಟ್ಟಿದ್ದಾರೆ.
ಶಿವಮೊಗ್ಗ, ಸೆಪ್ಟೆಂಬರ್ 13: ಕರ್ನಾಟಕ ಸರ್ಕಾರವು ಟ್ರಾಫಿಕ್ ಫೈನ್ (traffic fine discount scheme) ಪಾವತಿಗೆ ಶೇ. 50% ರಿಯಾಯಿತಿ ದರದ ಅವಕಾಶವನ್ನು ಕೊಟ್ಟಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹಲವು ವಾಹನ ಸವಾರರು ಫೈನ್ ಕಟ್ಟಿದ್ದಾರೆ. ದಂಡ ಪಾವತಿಗೆ ಸೆ. 10 ಕೊನೆಯ ದಿನವಾಗಿದ್ದರಿಂದ ಶಿವಮೊಗ್ಗದಲ್ಲಿ ವಾಹನ ಸವಾರರು ಮುಗಿಬಿದ್ದು ಟ್ರಾಫಿಕ್ ಫೈನ್ ಕಟ್ಟಿದ್ದಾರೆ. ಜೊತೆಗೆ ಆಳುದ್ದದ ಚಲನ್ ಪಡೆದುಕೊಂಡಿದ್ದಾರೆ. ಈ ಅವಕಾಶ ಇನ್ನೊಂದಷ್ಟು ದಿನ ವಿಸ್ತರಣೆಯಾಗಿದ್ದರೆ ತುಂಬಾನೇ ಅನುಕೂಲವಾಗುತ್ತಿತ್ತು ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 13, 2025 05:07 PM
