‘‘ನೀವು ಕಲ್ ಯಾಕ್ ಒಗೀತಿರೋ ಹಲ್ಕಟ್ ನನ್ ಮಕ್ಳ?’‘ ತುಮಕೂರಲ್ಲಿ ಮತ್ತೆ ಗುಡುಗಿದ ಯತ್ನಾಳ್
ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ಮಾಡಿದ ವಿಚಾರವಾಗಿ ರೋಷಾವೇಶದ ಮಾತುಗಳನ್ನಾಡಿದ್ದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ತುಮಕೂರಿನಲ್ಲಿ ಗುಡುಗಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಮುಸ್ಲಿಮರ ಕಿಡಿಗೇಡಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು, ಸೆಪ್ಟೆಂಬರ್ 13: ‘ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ವೇಳೆ ದೇಶದ ಯಾವುದೇ ಭಾಗದಲ್ಲಿ ಹಿಂದೂಗಳು ಕಲ್ಲು ತೂರಾಟ ಮಾಡಿದರೇ? ಇಲ್ಲವಲ್ಲ. ಅಂದಮೇಲೆ ನೀವು ಕಲ್ ಯಾಕ್ ಒಗೀತಿರ್ರೋ ಹಲ್ಕಟ್ ನನ್ ಮಕ್ಳ’ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು. ತುಮಕೂರಿನ ನಾಗರಕಟ್ಟೆ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಕಲ್ಲು ತೂರಾಟ ಮಾಡಿದ ಮುಸ್ಲಿಮರ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಎಂದರೆ ಟಿಪ್ಪು ಸುಲ್ತಾನ್ ಸರ್ಕಾರ ಇದ್ದ ಹಾಗೆ, ಔರಂಗಜೇಬ್ ಸರ್ಕಾರ ಇದ್ದಹಾಗೆ. ಅದಕ್ಕೆ ಹಿಂದೂಗಳನ್ನು ಕಂಡರೆ ಆಗಲ್ಲ ಎಂದರು. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೆ ಹೋಗಿ. ಈ ದೇಶದಲ್ಲಿರುವುದಾದರೆ, ‘ವಂದೇ ಮಾತರಂ, ಭಾರತ್ ಮಾತಾ ಕೀ ಜೈ’ ಎನ್ನಬೇಕು ಎಂದರು.

