ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ

Edited By:

Updated on: Feb 05, 2026 | 8:39 PM

ಕೊಲೆ ಕೇಸ್‌ನಲ್ಲಿ  (Murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಈತನ ಲವರ್‌ ಸುಚಿತ್ರಾ ಜೈಲು ಪಾಲಾಗಿದ್ದಾರೆ. ಈ ಜೋಡಿಹಕ್ಕಿ ಜೈಲು ಸೇರ್ತಿದ್ದಂತೆ ಇವರ ಒಂದೊಂದೇ ಕಾಮಪುರಾಣ ಹೊರಗೆ ಬರುತ್ತಿವೆ. ಕಮಲಾಕರ ಹಾಗೂ ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವಳಿಗಾಗಿ ನಾಯಿ ಥರಾ ಓಡಿದವನು ನಾನು ಎಂದು ಕಮಲಾಕರ್‌ ಹೇಳಿದ್ರೆ, ಅವನೇ ನನಗೆ ಸರ್ವಸ್ವ ಎಂದು ಸುಚಿತ್ರಾ ಹೇಳಿದ್ದಾಳೆ. ಮತ್ತೊಂದೆಡೆ ದಾಳಿಯಿಂದ ಗಾಯಗೊಂಡಿರುವ ಸುಚಿತ್ರಾಳ ಪತಿ ಮಹೇಶ್, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವೇಳೆ ಹೆಂಡ್ತಿ ಸುಚಿತ್ರಾಳ ಮತ್ತಷ್ಟು ನವರಂಗಿ ಆಟವನ್ನು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಶಿವಮೊಗ್ಗ, (ಫೆಬ್ರವರಿ 05): ಕೊಲೆ ಕೇಸ್‌ನಲ್ಲಿ  (Murder Case) ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಈತನ ಲವರ್‌ ಸುಚಿತ್ರಾ ಜೈಲು ಪಾಲಾಗಿದ್ದಾರೆ. ಈ ಜೋಡಿಹಕ್ಕಿ ಜೈಲು ಸೇರ್ತಿದ್ದಂತೆ ಇವರ ಒಂದೊಂದೇ ಕಾಮಪುರಾಣ ಹೊರಗೆ ಬರುತ್ತಿವೆ. ಕಮಲಾಕರ ಹಾಗೂ ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಅವಳಿಗಾಗಿ ನಾಯಿ ಥರಾ ಓಡಿದವನು ನಾನು ಎಂದು ಕಮಲಾಕರ್‌ ಹೇಳಿದ್ರೆ, ಅವನೇ ನನಗೆ ಸರ್ವಸ್ವ ಎಂದು ಸುಚಿತ್ರಾ ಹೇಳಿದ್ದಾಳೆ. ಮತ್ತೊಂದೆಡೆ ದಾಳಿಯಿಂದ ಗಾಯಗೊಂಡಿರುವ ಸುಚಿತ್ರಾಳ ಪತಿ ಮಹೇಶ್, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವೇಳೆ ಹೆಂಡ್ತಿ ಸುಚಿತ್ರಾಳ ಮತ್ತಷ್ಟು ನವರಂಗಿ ಆಟವನ್ನು ಟಿವಿ9 ಮುಂದೆ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

Published on: Feb 05, 2026 07:56 PM
Follow Us
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More