Pahelgam Terror Attack: ಮಂಜುನಾಥ್​ಗೆ ರಸ್ತೆಗಳಲ್ಲಿ ನೆರೆದು ಅಂತಿಮ ನಮನ ಸಲ್ಲಿಸಿದ ಶಿವಮೊಗ್ಗ ಜನ

Updated on: Apr 24, 2025 | 11:36 AM

ಈಗಾಗಲೇ ವ್ಯಾಪಕವಾಗಿ ವರದಿಯಾಗಿರುವಂತೆ, ಮಂಜುನಾಥ್, ಭರತ್ ಮತ್ತು ಮಧುಸೂದನ್ ಉಗ್ರರ ದಾಳಿಯಲ್ಲಿ ಹತರಾದ 28 ಜನರ ಪೈಕಿ ಮೂವರಾಗಿದ್ದಾರೆ. ಮಧುಸೂದನ್ ಆಂಧ್ರಪ್ರದೇಶ ಮೂಲದವರಾದರೂ ಬಹಳ ವರ್ಷಗಳಿಂದ ಕುಟುಂಬದೊಂದಿಗೆ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕುಟುಂಬಸ್ಥರ ಬೇಡಿಕೆ ಮೇರೆಗೆ ಅವರ ದೇಹವನ್ನು ಚೆನೈಗೆ ಕಳಿಸಲಾಗಿದೆ ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದ್ದಾರೆ.

ಶಿವಮೊಗ್ಗ, ಏಪ್ರಿಲ್ 24: ಮಂಗಳವಾರ ಮಧ್ಯಾಹ್ನ  ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಬಂದ ಭಯೋತ್ಪದಕರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ (Manjunath Rao) ಅವರ ಮೃತದೇಹ ಇಂದು ಬೆಳಗ್ಗೆ ವಿಮಾನವೊಂದರಲ್ಲಿ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಅಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗಗೆ ತರಲಾಯಿತು. ಅವರ ದೇಹ ಬರುತ್ತಿರುವ ಸುದ್ದಿ ಕೇಳಿದ ಜನರು ರಸ್ತೆಗಳಲ್ಲಿ ನೆರೆದು ತಮಗೆ ತಿಳಿದ ರೀತಿಯಲ್ಲಿ ಅಂತಿಮ ನಮನ ಸಲ್ಲಿಸಿದರು. ಕೆಲ ಜನ ಬೈಕ್​​ಗಳಲ್ಲಿ ಅಂಬ್ಯುಲೆನ್ಸ್ ಹಿಂಬಾಲಿಸಿದರು. ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮೃತದೇಹಗಳು ದೆಹಲಿಯಿಂದ ಬೆಂಗಳೂರುಗೆ ಬೆಳಗ್ಗೆ 6ಗಂಟೆಗೆ ಆಗಮಿಸಿದವು.

ಇದನ್ನೂ ಓದಿ:    Video: ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ