ರವಿವಾರದ ಗಲಭೆ ಬಳಿಕ ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗದ ರಾಗಿಗುಡ್ಡ ಪ್ರದೇಶ; ಸೆಕ್ಷನ್ 144 ಮುಂದುವರಿಕೆ
ಗಾರೆ ಕೆಲಸದವರು ಮನೆಗಳಲ್ಲಿ ಕೂತರೆ ಹೊಟ್ಟೆಪಾಡು ನಡೆಯದು. ಮೂವರು ಮಹಿಳೆಯರು ಕೈಯಲ್ಲಿ ಮಧ್ಯಾಹ್ನ ಊಟದ ಬ್ಯಾಗ್ ಹಿಡಿದುಕೊಂಡು ಕೆಲಸಗಳಿಗೆ ಹೋಗುತ್ತಿದ್ದಾರೆ. ಅವರು ಪ್ರಾಯಶಃ ಉತ್ತರ ಕರ್ನಾಟಕದವರಿರಬೇಕು. ನಗರ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಿ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ ಹೇಳಿದ್ದರು.
ಶಿವಮೊಗ್ಗ: ರವಿವಾರ ಸಾಯಂಕಾಲ ಈದ್ ಮಿಲಾದ್ ಮೆರವಣಿಗೆ (Eid Milad procession) ಸಂದರ್ಭದಲ್ಲಿ ನಡೆದ ಗಲಭೆಗಳ ಬಳಿಕ ಉದ್ವಿಗ್ನ ಸ್ಥಿತಿಯಲ್ಲಿದ್ದ ನಗರದ ರಾಗಿಗುಡ್ಡ ಪ್ರದೇಶ (Ragigudda area) ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಶಿವಮೊಗ್ಗ ಜಿಲ್ಲಾಡಳಿತ (Shivamogga district administration) ಸೆಕ್ಷನ್ 144 ಮುಂದುವರಿಸಿರುವ ಕಾರಣ ರಸ್ತೆಗಳಲ್ಲಿ ಜನ ಓಡಾಡುತ್ತಿರುವುದನ್ನು ನೋಡಬಹುದಾದರೂ ಗುಂಪುಗಳು ಕಾಣಲ್ಲ. ಅಹಿತಕರ ಘಟನೆಗಳ ಪುನರಾವರ್ತನೆಯಾಗದಂತೆ ನಿಗಾವಹಿಸಲು ಏರಿಯ ತುಂಬ ಪೊಲೀಸರಿದ್ದಾರೆ. ಶಾಲಾ ಮತ್ತು ಕಾಲೇಜು ಮಕ್ಕಳಿಗೆ ಅರ್ಧವಾರ್ಷಿಕ ಪರೀಕ್ಷೆಗಳಿರುವುದರಿಂದ ತಮ್ಮ ತಮ್ಮ ವಿದ್ಯಾ ಕೇಂದ್ರಗಳಿಗೆ ಹೋಗುವ ಅನಿವಾರ್ಯತೆ ಇದೆ. ಮಕ್ಕಳು ಕೊನೆಯ ನಿಮಿಷದ ತಯಾರಿ ಮಾಡಿಕೊಳ್ಳುತ್ತಾ ತಮ್ಮ ಸ್ಕೂಲ್ ಬಸ್ ಗಾಗಿ ಕಾಯುತ್ತಿರುವದನ್ನು ನೋಡಬಹುದು. ಗಾರೆ ಕೆಲಸದವರು ಮನೆಗಳಲ್ಲಿ ಕೂತರೆ ಹೊಟ್ಟೆಪಾಡು ನಡೆಯದು. ಮೂವರು ಮಹಿಳೆಯರು ಕೈಯಲ್ಲಿ ಮಧ್ಯಾಹ್ನ ಊಟದ ಬ್ಯಾಗ್ ಹಿಡಿದುಕೊಂಡು ಕೆಲಸಗಳಿಗೆ ಹೋಗುತ್ತಿದ್ದಾರೆ. ಅವರು ಪ್ರಾಯಶಃ ಉತ್ತರ ಕರ್ನಾಟಕದವರಿರಬೇಕು. ನಗರ ಪ್ರದೇಶಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಓಪನ್ ಮಾಡಿ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ