‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು’; ‘ಜೈಲರ್’ ಚಿತ್ರದ ನರಸಿಂಹನ ಪಾತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಶಿವಣ್ಣ ಖುಷ್
‘ಜೈಲರ್’ ಸಿನಿಮಾ ಮೂಲಕ ಶಿವರಾಜ್ಕುಮಾರ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪರಭಾಷೆಯಲ್ಲೂ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್ಕುಮಾರ್, ‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ’ ಎಂದಿದ್ದಾರೆ ಅವರು.
‘ಜೈಲರ್’ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ನರಸಿಂಹನ ಪಾತ್ರದ ಮೂಲಕ ಗಮನ ಸೆಳೆದರು. ಈ ಚಿತ್ರದ ಮೂಲಕ ಶಿವರಾಜ್ಕುಮಾರ್ (Shivarajkumar) ಅವರು ಎಲ್ಲರ ಗಮನ ಸೆಳೆದಿದ್ದಾರೆ. ಪರಭಾಷೆಯಲ್ಲೂ ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಿವರಾಜ್ಕುಮಾರ್, ‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ನನ್ನನ್ನು ಮೆಚ್ಚಿಕೊಂಡಿದ್ದಾರೆ. ಅದು ಸಹಜ. ಆದರೆ, ಕೇರಳ, ತಮಿಳುನಾಡು, ಆಂಧ್ರದಲ್ಲಿ ನನ್ನ ಪಾತ್ರಕ್ಕೆ ಈ ಮಟ್ಟದ ಮೆಚ್ಚುಗೆ ಸಿಗುತ್ತಿರುವುದು ಖುಷಿ ನೀಡಿದೆ’ ಎಂದಿದ್ದಾರೆ ಶಿವರಾಜ್ಕುಮಾರ್. ಜೊತೆಗೆ ರಜನಿಕಾಂತ್, ಸನ್ ಪಿಕ್ಚರ್ಸ್ ಹಾಗೂ ನೆಲ್ಸನ್ ದಿಲೀಪ್ಕುಮಾರ್ಗೆ ಧನ್ಯವಾದ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ