ಗೀತಾ ಸರಿಯಾಗಿ ಕೆಲಸ ಮಾಡದಿದ್ರೆ ಹೆಸರು ಚೇಂಜ್ ಮಾಡ್ಕೋತೀನಿ ಎಂದ ಶಿವರಾಜ್​ಕುಮಾರ್

|

Updated on: Mar 26, 2024 | 8:44 AM

ಶಿವರಾಜ್​ಕುಮಾರ್ ಅವರು ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೀತಾ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ಅವರು ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರವಾಗಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೀತಾ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಶಿವರಾಜ್​ಕುಮಾರ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡಿದ್ದಾರೆ. ಪತ್ನಿ ಗೆದ್ದರೆ ಜನರ ಪರವಾಗಿ ಅವರು ಕೆಲಸ ಮಾಡುತ್ತಾರೆ ಎನ್ನುವ ಭರವಸೆ ನೀಡಿದ್ದಾರೆ. ‘ಗೀತಾಗೆ ಅವಕಾಶ ಕೊಟ್ಟುನೋಡಿ. ಅವರು ಜನರ ಪರವಾಗಿ ಕೆಲಸ ಮಾಡ್ತಾರೆ. ಆ ಬಳಿಕವೂ ಅವರು ಸರಿಯಾದ ಅಭ್ಯರ್ಥಿನ ಆಯ್ಕೆ ಮಾಡಿಲ್ಲ ಎನಿಸಿದರೆ ಹೆಸರು ಚೇಂಜ್ ಮಾಡ್ಕೋತೀನಿ. ಮಾತು ಕೊಟ್ಟಮೇಲೆ ಅದನ್ನು ಫಾಲೋ ಮಾಡ್ತೀವಿ’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ