‘ಜೇಮ್ಸ್​’ ಚಿತ್ರಕ್ಕೆ ಹೇಗೆ ಡಬ್ಬಿಂಗ್​ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು: ಶಿವಣ್ಣ

| Updated By: ಮದನ್​ ಕುಮಾರ್​

Updated on: Feb 05, 2022 | 1:47 PM

ಕಳೆದ ವರ್ಷ ನಡೆದ ‘ಸಲಗ’ ಪ್ರೀ ರಿಲೀಸ್​ ಇವೆಂಟ್​ಗೆ ಪುನೀತ್​ ರಾಜ್​ಕುಮಾರ್​ ಬಂದಿದ್ದರು. ಆದರೆ ಸಕ್ಸಸ್​ ಮೀಟ್​ ಆಗುವ ಹೊತ್ತಿಗೆ ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.

ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಕೊನೇ ಸಿನಿಮಾ ‘ಜೇಮ್ಸ್​’ (James Movie) ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟಿಂಗ್​ ಮುಗಿಸಿಕೊಟ್ಟಿದ್ದ ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದು ಇಡೀ ಚಿತ್ರರಂಗಕ್ಕೆ ನೋವು ತಂದ ಸಂಗತಿ. ಈಗ ಆ ಸಿನಿಮಾಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೆಯುತ್ತಿದೆ. ‘ಜೇಮ್ಸ್​’ ಚಿತ್ರದಲ್ಲಿ ಶಿವರಾಜ್​ಕುಮಾರ್ (Shivarajkumar)​ ಮತ್ತು ರಾಘವೇಂದ್ರ ರಾಜ್​ಕುಮಾರ್​ ಕೂಡ ನಟಿಸಿದ್ದಾರೆ. ಇತ್ತೀಚೆಗಷ್ಟೇ ಡಬ್ಬಿಂಗ್​ ಮುಗಿಸಿರುವ ಶಿವಣ್ಣ ಆ ಅನುಭವನ್ನು ಹೇಳಿಕೊಂಡಿದ್ದಾರೆ. ‘ನಾನು ಹೇಗೆ ಡಬ್ಬಿಂಗ್​ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು. ಅವನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ಶಿವಣ್ಣ ಹೇಳಿದ್ದಾರೆ. ‘ಸಲಗ’ ಚಿತ್ರದ ಸಕ್ಸಸ್​ ಮೀಟ್​ ಸಮಾರಂಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಕಳೆದ ವರ್ಷ ನಡೆದ ‘ಸಲಗ’ ಪ್ರೀ ರಿಲೀಸ್​ ಇವೆಂಟ್​ಗೆ ಅಪ್ಪು ಬಂದಿದ್ದರು. ಆದರೆ ಸಕ್ಸಸ್​ ಮೀಟ್​ ಆಗುವ ಹೊತ್ತಿಗೆ ಅವರಿಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ. ‘ನಮ್ಮ ಹೃದಯದಲ್ಲಿ ಅವನು ಇದ್ದಾನೆ. ಹಾಗಾಗಿ ಈ ಸಂಭ್ರಮದಲ್ಲಿ ಕೂಡ ಅವನು ಇದ್ದಾನೆ ಅಂದುಕೊಳ್ಳೋಣ’ ಎಂದು ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ:

ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್​, ಕೀರ್ತಿ; ‘ಸಲಗ’ ಸಕ್ಸಸ್​ ವೇದಿಕೆಯಲ್ಲಿ ‘ಹ್ಯಾಟ್ರಿಕ್​ ಹೀರೋ’

‘ಜೇಮ್ಸ್​’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಗುಡ್​ ನ್ಯೂಸ್​ ಕೇಳಿ ಖುಷಿಯಾದ ಪುನೀತ್​ ಫ್ಯಾನ್ಸ್​