‘ದೇವರು ಕೊಟ್ಟಾಗ ಬೇಡ ಅನ್ಬಾರ್ದು’; ಸಾಲು ಸಾಲು ಸಿನಿಮಾ ಒಪ್ಪಿಕೊಂಡ ಬಗ್ಗೆ ಶಿವಣ್ಣ ಮಾತು

|

Updated on: Oct 23, 2023 | 8:32 AM

ಶಿವರಾಜ್​ಕುಮಾರ್ ವಯಸ್ಸು 61 ದಾಟಿದೆ. ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ನಿರಂತರವಾಗಿ ಸಿನಿಮಾ ಮಾಡುತ್ತಲೇ ಇರಬೇಕು ಅನಿಸೋದು ಏಕೆ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

ಶಿವರಾಜ್​ಕುಮಾರ್ (Shivarajkumar) ವಯಸ್ಸು 61 ದಾಟಿದೆ. ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ಎನರ್ಜಿ ಯಾವಾಗಲೂ ಕಡಿಮೆ ಆಗಿಲ್ಲ. ಈ ಬಗ್ಗೆ ಶಿವರಾಜ್​ಕುಮಾರ್ ಅವರಿಗೆ ಪ್ರಶ್ನೆ ಎದುರಾಗಿದೆ. ನಿರಂತರವಾಗಿ ಸಿನಿಮಾ ಮಾಡುತ್ತಲೇ ಇರಬೇಕು ಅನಿಸೋದು ಏಕೆ ಎಂದು ಅವರಿಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ದೇವರು ಕೊಟ್ಟಾಗ ಬೇಡ ಎನ್ನಬಾರದು. ದೇವರು ಎನರ್ಜಿ ಕೊಟ್ಟಿದ್ದಾನೆ. ಸಿನಿಮಾ ಸಾಕು ಎನ್ನುವ ಭಾವನೆ ಇಲ್ಲಿಯವರೆಗೂ ಬಂದಿಲ್ಲ’ ಎಂದಿದ್ದಾರೆ ಶಿವರಾಜ್​ಕುಮಾರ್. ಅವರ ನಟನೆಯ ‘ಘೋಸ್ಟ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ