Mysore Dasara: ಯದುವಂಶ ಅರಸೊತ್ತಿಗೆ ಪಟ್ಟದ ಖಡ್ಗಕ್ಕೆ ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತುತಂದು ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ

Mysore Dasara: ಯದುವಂಶ ಅರಸೊತ್ತಿಗೆ ಪಟ್ಟದ ಖಡ್ಗಕ್ಕೆ ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತುತಂದು ಕೋಡಿ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 23, 2023 | 10:47 AM

ಹೋಮದ ನಂತರ ಯದುವಂಶದ ಪಟ್ಟದ ಆನೆ, ಪಟ್ಟದ ಖಡ್ಌ, ಪಟ್ಟದ ಕುದುರೆ ಮತ್ತು ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತರಲಾಗಿದೆ. ಪಟ್ಟದ ಖಡ್ಗವನ್ನು ಚಿನ್ನದ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಕೋಡಿ ಸೋಮೇಶ್ವರ ದೇವಸ್ಥಾನದೊಂದಿಗೆ ಒಡೆಯರ್ ಅರಸೊತ್ತಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ರಾಮ್ ಹೇಳುತ್ತಾರೆ.

ಮೈಸೂರು: ಇಂದು ನಾಡಿನಾದ್ಯಂತ ಸಂಭ್ರಮ ಸಡಗರಗಳೊಂದಿಗೆ ಆಯುಧ ಪೂಜೆ ಅಚರಿಸಲ್ಪಡುತ್ತಿರುವಂತೆಯೇ, ರಾಜ್ಯದ ಸಾಂಸ್ಕೃತಿಕ ನಗರಿಯಲ್ಲಿ ಪ್ರತಿವರ್ಷ ವೈಭವೋಪೇತವಾಗಿ ನಡೆಯುವ ದಸರಾ ಉತ್ಸವ ಕೊನೆ ಹಂತವನ್ನು ತಲುಪಿದೆ. ಮೈಸೂರು ಒಡೆಯರ್ ಅರಸೊತ್ತಿಗೆಯಲ್ಲಿ (Wodeyar Dynasty) ಆಯುಧ ಪೂಜೆಯನ್ನು (Ayudha Puje) ಸಾಂಪ್ರದಾಯಿಕ ವಿಧಿವಿಧಾನಗಳಿಂದ ಅದ್ದೂರಿಯಾಗಿ ಆಚರಿಅಸಲ್ಪಡುತ್ತದೆ. ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಪೂಜಾ ಕೈಂಕರ್ಯಗಳ ಪ್ರತ್ಯಕ್ಷ ವರದಿಯನ್ನು ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ ಕಳಿಸಿದ್ದಾರೆ. ಅವರು ಹೇಳುವ ಹಾಗೆ ಅರಮನೆಯಲ್ಲಿ ಬೆಳಗ್ಗೆ 5.30 ಕ್ಕೆ ಚಂಡಿಕಾ ಹೋಮದೊಂದಿಗೆ ಪೂಜಾ ವಿಧಿಗಳು ಆರಂಭವಾಗಿವೆ. ಹೋಮದ ನಂತರ ಯದುವಂಶದ ಪಟ್ಟದ ಆನೆ, ಪಟ್ಟದ ಖಡ್ಗ (dynasty sword), ಪಟ್ಟದ ಕುದುರೆ ಮತ್ತು ಪಟ್ಟದ ಹಸುವನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ (Kodi Someshwara temple) ತರಲಾಗಿದೆ. ಪಟ್ಟದ ಖಡ್ಗವನ್ನು ಚಿನ್ನದ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಕೋಡಿ ಸೋಮೇಶ್ವರ ದೇವಸ್ಥಾನದೊಂದಿಗೆ ಒಡೆಯರ್ ಅರಸೊತ್ತಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ರಾಮ್ ಹೇಳುತ್ತಾರೆ. ಅದಾದ ಮೇಲೆ ಖಡ್ಗ, ಆನೆ, ಕುದುರೆ ಮತ್ತು ಹಸುಗಳಿಗೆ ಅರಮನೆಗೆ ವಾಪಸ್ಸು ಕರೆದೊಯ್ದು ಅಲ್ಲೂ ಪೂಜೆ ನಡೆಯುತ್ತದೆ ಎಂದು ರಾಮ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ