ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಜನವೋ ಜನ, ಫುಲ್ ಟ್ರಾಫಿಕ್ ಜಾಮ್
ಹೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಇಂದು ಆಯುಧ ಪೂಜೆ ಇರುವುದರಿಂದ ಜನರು ಮಾರ್ಕೆಟ್ಗೆ ಆಗಮಿಸಿ ಪೂಜಾ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಜನ ಸಾಗರವೇ ಸೇರಿದ್ದು, ದಸದಾ ಹಬ್ಬದ ಖರೀದಿ ಬಲು ಜೋರಾಗಿದೆ. ಈ ಹಿನ್ನೆಲೆಯಯಲ್ಲಿ ಇಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ಬೆಂಗಳೂರು, (ಅಕ್ಟೋಬರ್ 23): ಕರ್ನಾಟಕದಾದ್ಯಂತ ಶರನ್ನನವರಾತ್ರಿ (Navaratri) ಹಬ್ಬವನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ನವರಾತ್ರಿಯ ಕೊನೆ ದಿನವಾದ 9ನೇ ದಿನವಾದ ಇಂದು (ಅ.23) ನವಶಕ್ತಿಯರಲ್ಲಿ 9ನೇ ಅವತಾರವಾದ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಪ್ರಾತಃಕಾಲದಿಂದಲೇ ನಾಡಿನ ದೇವಿ ದೇವಾಲಯಗಳಲ್ಲಿ ಪೂಜಾಕೈಕರ್ಯಗಳು ಆರಂಭವಾಗಿವೆ. ಇನ್ನು ಸೋಮವಾರ ಆಯುಧಪೂಜೆ ಆಗಿದ್ದು, ಜನರು ತಾವು ಕಾಯಕಕ್ಕೆ ಬಳಸುವ ವಸ್ತುಗಳನ್ನು ಪೂಜಿಸುತ್ತಿದ್ದಾರೆ. ಅದರಲ್ಲೂ ಆಯುಧಪೂಜೆ ಹಾಗೂ ನಾಳಿನ ವಿಜಯದಶಮಿ ಹಬ್ಬದ ಖರೀದಿ ಜೋರಾಗಿದೆ. ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಪೂಜಾ ಸಾಮಾಗ್ರಿಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಾಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos