ಆನ್‌ಲೈನ್ ಹೂಡಿಕೆಯಲ್ಲಿ 50 ಲಕ್ಷ ರೂ. ಕಳೆದುಕೊಂಡ ಸಾಫ್ಟ್‌ವೇರ್ ಇಂಜಿನಿಯರ್
ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ದರ್ಶನ್ ಎಸ್ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 50.53 ಲಕ್ಷ ರೂಪಾಯಿ ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕರು ವಿದೇಶದಲ್ಲಿ ಕುಳಿತು ವಂಚನೆ ಎಸಗುತ್ತಿದ್ದಾರೆ.
ಬೆಂಗಳೂರು ಅ.23: ನಗರದ ಸಾಫ್ಟ್‌ವೇರ್ ವೃತ್ತಿಪರರೊಬ್ಬರು ಸೈಬರ್ (Cyber Crime) ವಂಚಕರ ಜಾಲದಲ್ಲಿ ಸಿಲುಕಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಆನ್‌ಲೈನ್ ಹೂಡಿಕೆಯಲ್ಲಿ (Online Investment) 50 ಲಕ್ಷ ಕ್ಕೂ ಹೆಚ್ಚು ರೂಪಾಯಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಇದು ಇತ್ತೀಚಿನ ತಿಂಗಳುಗಳಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ವರದಿಯಾದ ನೂರಾರು ಪ್ರಕರಣಗಳಲ್ಲಿ ಒಂದಾಗಿದೆ.
ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ದರ್ಶನ್ ಎಸ್ ಅವರಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ 50.53 ಲಕ್ಷ ರೂಪಾಯಿ ವಂಚಿಸಿದ್ದಾರೆ. ವಂಚಕರು ವಿದೇಶದಿಂದ ಫೋನ್ ಸಂಖ್ಯೆ ಮೂಲಕ ಸಂದೇಶ ಕಳುಹಿಸುವ ವೇದಿಕೆಗಳಾದ Whatsapp ಮತ್ತು Telegram ನಲ್ಲಿ ದರ್ಶನ್ ಅವರನ್ನು ಸಂಪರ್ಕಿಸಿ, ಆನ್ಲೈನ್ನಲ್ಲಿ ಹೂಡಿಕೆ ಮಾಡಲು ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ 18 ಟೈಪ್ಸ್ ಸೈಬರ್ ಕ್ರೈಂ ಮೂಲಕ 470 ಕೋಟಿ ರೂ. ವಂಚನೆ: ಕಮಿಷನರ್ ದಯಾನಂದ್ ಮಾಹಿತಿ
ಆರಂಭದಲ್ಲಿ ದರ್ಶನ್ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದೆ. ಅದಕ್ಕೆ ದುಪ್ಪಟ್ಟು ಆದಾಯವನ್ನು ಗಳಿಸಿದೆ. ಇದರಿಂದ ನನಗೆ ಆನ್‌ಲೈನ್ ಹೂಡಿಕೆ ಮೇಲೆ ವಿಶ್ವಾಸ ಬಂತು. ನಂತರ ವಂಚಕರು ಹೆಚ್ಚಿನ ಮೊತ್ತ 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಹೇಳಿದರು. ಅದರಂತೆ ದರ್ಶನ್ ಹೂಡಿಕೆ ಮಾಡಿದೆ. ಇದಾದ ಬಳಿಕ ವಂಚಕರು 50 ಲಕ್ಷ ರೂ.ವರಗೆ ಹೂಡಿಕೆ ಮಾಡಲು ಹೇಳಿದರು.
ಅದರಂತೆ ದರ್ಶನ್ ಹಣವನ್ನು ವಿವಿಧ ಖಾತೆಗಳಲ್ಲಿ ಠೇವಣಿ ಮಾಡಿದೆ. ನಂತರ ಅವರು ನನ್ನನ್ನು ಸಂಪರ್ಕಿಸಲಿಲ್ಲ. ನಾನು ಕೂಡ ಸಂಪರ್ಕಿಸಲು ಯತ್ನಿಸಿದೆ, ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೆ ದರ್ಶನ ಅವರ ಅಕೌಂಟ್ಗೆ ಹಣ ಹಾಕುವುದನ್ನು ನಿಲ್ಲಿಸಿದರು. ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಗರಣವು ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 15 ರ ನಡುವೆ ನಡೆದಿದೆ. ವಂಚಕರು ಎಮ್ಮಾ ಮತ್ತು ಖಾಸಗಿ ಜಾಹೀರಾತು ಸಂಸ್ಥೆಯ ಹೆಸರಿನ ಮೇಲೆ ವಂಚನೆ ನಡೆದಿದೆ. ಈ ಪ್ರಕರಣ ಕೂಡ ಬೇರೆ ಸೈಬರ್ ಕ್ರೈಂನಂತೆಯೇ ಇದೆ. ವಂಚಕರಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ