ಕಿತ್ತೂರು ರಾಣಿ ಚೆನ್ನಮ್ಮಳನ್ನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಬೇಕು: ಮೃತ್ಯುಂಜಯ ಸ್ವಾಮೀಜಿ

ಸಿಎಂ ಸಿದ್ದರಾಮಯ್ಯ ಅವರ ಬಳಿ ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಮೂರು ಮನವಿಗಳನ್ನ ಮಾಡ್ತಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ದಾಖಲೆಗಳು ಹಾಗೂ ಮ್ಯೂಸಿಯಂನಲ್ಲಿರುವ ಖಡ್ಗವನ್ನು ರಾಜ್ಯಕ್ಕೆ ವಾಪಸ್ ತರಬೇಕು. ಇದರ ಬಗ್ಗೆ ಕೇಂದ್ರದ ಗಮನಕ್ಕೆ ತರಬೇಕು. ಪುಣೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 32,000 ದಾಖಲೆಗಳಿವೆ‌. ಲಂಡನ್ ಮ್ಯೂಸಿಯಂನಲ್ಲಿರುವ ಚೆನ್ನಮ್ಮ ಖಡ್ಗ ರಾಜ್ಯಕ್ಕೆ ತರಬೇಕು ಎಂದು ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ಕಿತ್ತೂರು ರಾಣಿ ಚೆನ್ನಮ್ಮಳನ್ನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಬೇಕು: ಮೃತ್ಯುಂಜಯ ಸ್ವಾಮೀಜಿ
ಜಯಮೃತ್ಯುಂಜಯ ಸ್ವಾಮೀಜಿ
Follow us
Anil Kalkere
| Updated By: ಆಯೇಷಾ ಬಾನು

Updated on:Oct 23, 2023 | 12:23 PM

ಬೆಂಗಳೂರು, ಅ.23: ಸಿಎಂಗೆ ಕಿತ್ತೂರು ರಾಣಿ ಚೆನ್ನಮ್ಮ (Kittur Rani Chennamma) ಕುರಿತಾದ 3 ಮನವಿ ಮಾಡ್ತಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ರಾಣಿ ಚೆನ್ನಮ್ಮ ದಾಖಲೆಗಳು ಹಾಗೂ ಮ್ಯೂಸಿಯಂನಲ್ಲಿರುವ ಖಡ್ಗವನ್ನು ನಮ್ಮ ರಾಜ್ಯಕ್ಕೆ ವಾಪಸ್ ತರಬೇಕು. ಈ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರದ ಗಮನಕ್ಕೆ ತರಬೇಕು ಎಂದು ಬೆಂಗಳೂರಿನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿ (Basava Jaya Mruthunjaya Swamiji) ಆಗ್ರಹಿಸಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಪ್ರಯುಕ್ತ ಟೌನ್ ಹಾಲ್ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ಸಚಿವ ಎಂಸಿ ಸುಧಾಕರ್, ಶಾಸಕ ವಿನಯ್ ಕುಲಕರ್ಣಿ, ಜಯಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ಅವರ ಬಳಿ ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಮೂರು ಮನವಿಗಳನ್ನ ಮಾಡ್ತಿದ್ದೇನೆ. ಮಹಾರಾಷ್ಟ್ರದ ಪುಣೆಯಲ್ಲಿರುವ ದಾಖಲೆಗಳು ಹಾಗೂ ಮ್ಯೂಸಿಯಂನಲ್ಲಿರುವ ಖಡ್ಗವನ್ನು ರಾಜ್ಯಕ್ಕೆ ವಾಪಸ್ ತರಬೇಕು. ಇದರ ಬಗ್ಗೆ ಕೇಂದ್ರದ ಗಮನಕ್ಕೆ ತರಬೇಕು. ಪುಣೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 32,000 ದಾಖಲೆಗಳಿವೆ‌. ಲಂಡನ್ ಮ್ಯೂಸಿಯಂನಲ್ಲಿರುವ ಚೆನ್ನಮ್ಮ ಖಡ್ಗ ರಾಜ್ಯಕ್ಕೆ ತರಬೇಕು. ಶಿವಾಜಿ ಖಡ್ಗ ಹೇಗೆ ತಂದ್ರೋ ಹಾಗೇ ಚೆನ್ನಮ್ಮ ಖಡ್ಗ ಸಹ ವಾಪಸ್ ತರಬೇಕು ಎಂದು ಆಗ್ರಹಿಸಿದರು.

ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಿಸಬೇಕು. ಲೋಕಸಭೆಯಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ತಪ್ಪಾಗಿ ಆಗಿದೆ. ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಲಕ್ಷ್ಮೀಬಾಯಿ ಎನ್ನಲಾಗುತ್ತಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ 32 ವರ್ಷ ಹಿಂದೆಯೇ ರಾಜ್ಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಕಿತ್ತೂರು ಗ್ರಾಮವನ್ನು 12D ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಇಡೀ ಜಗತ್ತಿಗೆ ಕಿತ್ತೂರು ಪರಿಚಯಿಸಬೇಕು ಎಂದರು.

ಇದನ್ನೂ ಓದಿ: ತುಂಬಿದ ಕಾರ್ಯಕ್ರಮದಲ್ಲಿ ನರ್ಸ್​ಗಳ ಸೌಂದರ್ಯವನ್ನು ಹಾಡಿಹೊಗಳಿದ ಶಾಸಕ​ ರಾಜು ಕಾಗೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆ

ಲಿಂಗಾಯತ ಅಧಿಕಾರಿಗಳ ಕಡೆಗಣನೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ

ಲಿಂಗಾಯತರನ್ನ ಕಡೆಗಣಿಸಲಾಗ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ  ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಧರ್ಮ ಗುರುಗಳು ಆಡಳಿತ ಯಂತ್ರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸುಮ್ಮನಿದ್ದೇವೆ. ಸಮಾಜದ ಮುಖಂಡರು ಧ್ವನಿ ಎತ್ತಿದ ಮೇಲೆ ಅದನ್ನ ಸರಿಪಡಿಸುವ ಕೆಲಸ ಮುಖ್ಯಮಂತ್ರಿಗಳು ಮಾಡಲಿ ಎಂದು ಸಲಹೆ ನೀಡಿದ್ದೇನೆ. ಶಾಮನೂರವರು ಸಹ ಸಿಎಂ ಜೊತೆ ಮಾತನಾಡ್ತಿನಿ ಎಂದಿದ್ದಾರೆ. ಅವರು ಏನ್ ಮಾತನಾಡಿದ್ದಾರೆ ಗೊತ್ತಿಲ್ಲ. ಕೇವಲ ಲಿಂಗಾಯತ ಮಾತ್ರವಲ್ಲದೆ ಯಾವುದೇ ಜನಾಂಗದ ಅಧಿಕಾರಿ ಇದ್ರೆ ಅವರಿಗೆ ಸರ್ಕಾರ ಒಳ್ಳೆಯ ಕಡೆ ನಿಯೋಜಿಸಲಿ ಎಂದರು.

ಇನ್ನು ಲಿಂಗಾಯತ ಮೀಸಲಾತಿ ವಿಚಾರ ಸಂಬಂಧ, ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಳೆದ ಸರ್ಕಾರದ 2d ಹೊಸ ಮೀಸಲಾತಿ ಕೊಡ್ತು. ಆದ್ರೆ ಮೀಸಲಾತಿ ಇದುವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಕಾರಣ ನೀತಿ ಸಂಹಿತೆ ಹೊಸ ಸರ್ಕಾರ ಬಂತು. ಈಗ ಸರ್ಕಾರ ಬಂದ ನಂತರ ನಮ್ಮ ಎಲ್ಲಾ ಶಾಸಕರು ಸಹ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಬಜೆಟ್ ಅಧಿವೇಶನಕ್ಕೂ ಮುನ್ನವೇ ಸಭೆ ಕರೆಯುತ್ತೇವೆ ಎಂದಿದ್ದರು. ಬಜೆಟ್ ಮುಗಿದು ಮೂರು ತಿಂಗಳಾದ್ರು ಅದ್ರ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುತ್ತೇವೆ. ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಷ್ಟಲಿಂಗ ಪೂಜೆ ಮ‌ೂಲಕ ಹೋರಾಟ ಶುರು ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಈ ಹೋರಾಟ ನಡೆಯುತ್ತಿದೆ. ಸರ್ಕಾರದ ಮೇಲೂ ಒತ್ತಡ ಹಾಕ್ತಿದ್ದೇವೆ. ಲೋಕಸಭಾ ಚುನಾವಣಾ ಒಳಗಡೆ ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕು ಇಲ್ಲ ಅಂದ್ರೆ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತೆ ಎಂಬ ಎಚ್ಚರಿಕೆ ನೀಡಿದರು.

 ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:20 pm, Mon, 23 October 23