ತುಂಬಿದ ಕಾರ್ಯಕ್ರಮದಲ್ಲಿ ನರ್ಸ್​ಗಳ ಸೌಂದರ್ಯವನ್ನು ಹಾಡಿಹೊಗಳಿದ ಶಾಸಕ​ ರಾಜು ಕಾಗೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮೆ

ಆಸ್ಪತ್ರೆಯೊಂದರ ಮಹಿಳಾ ನರ್ಸ್​ಗಳ ಸೌಂದರ್ಯವನ್ನು ಹಾಡಿಹೊಗಳಿದ್ದು, ಇದು ಭಾರೀ ವಿವಾದಕ್ಕೀಡಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಾಂಗ್ರೆಸ್​ ಶಾಸಕ ರಾಜು ಕಾಗೆ ಕ್ಷಮೆ ಕೋರಿದ್ದಾರೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದಾರೆ. ಅಷ್ಟಕ್ಕೂ ವಿಡಿಯೋನಲ್ಲೇನಿದೆ? ಅವರು ಹೇಳಿದ್ದೇನು? ಇಲ್ಲಿದೆ ವಿವ

ತುಂಬಿದ ಕಾರ್ಯಕ್ರಮದಲ್ಲಿ ನರ್ಸ್​ಗಳ ಸೌಂದರ್ಯವನ್ನು ಹಾಡಿಹೊಗಳಿದ ಶಾಸಕ​ ರಾಜು ಕಾಗೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ  ಕ್ಷಮೆ
ಕಾಂಗ್ರೆಸ್​ ಶಾಸಕ ರಾಜು ಕಾಗೆ
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ರಮೇಶ್ ಬಿ. ಜವಳಗೇರಾ

Updated on:Oct 23, 2023 | 2:57 PM

ಬೆಳಗಾವಿ, (ಅಕ್ಟೋಬರ್ 23): ತುಂಬಿದ ಕಾರ್ಯಕ್ರಮದಲ್ಲಿ ನರ್ಸ್​ಗಳ (Nurse) ಸೌಂದರ್ಯದ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು (Raju Kage) ಕಾಗೆ ಕ್ಷಮೆಯಾಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಪಿ.ಕೆ‌.ನಾಗನೂರು ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ನರ್ಸ್​ಗಳ ಬಗ್ಗೆ ಬ್ಯುಟಿ ಬಗ್ಗೆ ಮಾತನಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೇ ಇದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ರಾಜು ಕಾಗೆ, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಕ್ಷಮೆ ಕೋರಿದ್ದಾರೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ರಾಜು ಕಾಗೆ, ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಿನ್ನೆ(ಅಕ್ಟೋಬರ್ 22) ಸಮಾರಂಭದಲ್ಲಿ ಮಾತನಾಡಿದ್ದು ಯಾರನ್ನೂ ಉದ್ದೇಶಿಸಿ ಅಲ್ಲ. ನಾನೇನೂ ನಾಲ್ಕು ಗೋಡೆಯಲ್ಲಿ ಮಾತನಾಡಿಲ್ಲ. ಮುದುಕನಾದನಲ್ಲ ಅಂತಾ ಮನಸ್ಸಿಗೆ ನೋವಾಯ್ತು ಅಂತಾ ಹೇಳಿದೆ. ನನ್ನ ಮಾತಿನಿಂದ ಏನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತಿದ್ದೇನೆ ಎಂದು ಸ್ಪಷ್ಟಡಿಸಿದ್ದಾರೆ.

ಇದನ್ನೂ ಓದಿ: ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ: ಕಾಂಗ್ರೆಸ್​ ಶಾಸಕನ ಮಾತು ವೈರಲ್

ನಿನ್ನೆ ಸಮಾರಂಭದಲ್ಲಿ ಮಾತನಾಡಿದ್ದು ಯಾರನ್ನೂ ಉದ್ದೇಶಿಸಿ ಅಲ್ಲ. ನಾನೇನೂ ನಾಲ್ಕು ಗೋಡೆಯಲ್ಲಿ ಮಾತನಾಡಿಲ್ಲ, ಸಾವಿರಾರು ಜನರಿದ್ದ ಸಭೆಯಲ್ಲಿ ಮಾತನಾಡಿದ್ದೇನೆ. ನಾನು ಜವಾಬ್ದಾರಿಯಿಂದ ಮಾತನಾಡಿದ್ದೇನೆ. ನಾನು ಹೇಳಿದ್ದು ವಯಸ್ಸು ಆಯ್ತಲ್ಲ, ಮುದುಕನಾದನಲ್ಲ ಎಂದು ಮನಸ್ಸಿಗೆ ನೋವಾಯ್ತು ಎಂದು ಹೇಳಿದೆ. ಶಬ್ದದ ಅರ್ಥ ಸಾವಿರಾರೂ ನಮೂನೆ ನೀವು ಅರ್ಥ ಮಾಡಿಕೊಳ್ಳಬಹುದು. ನನಗೆ ವಯಸ್ಸಾಯ್ತು ಅಂತಾ ಮಾನಸಿಕ ನೋವಾಯ್ತು. ಏಮಾದರೂ ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತಿದ್ದೇನೆ. ಯಾವುದೇ ಉದ್ದೇಶದಿಂದ ನಾನು ಮಾತನಾಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ನರ್ಸ್​ ಬಗ್ಗೆ ರಾಜು ಕಾಗೆ ಹೇಳಿದ್ದೇನು?

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ.ನಾಗನೂರು ಗ್ರಾಮದಲ್ಲಿ ದಸರಾ ಮಹೋತ್ಸವದಲ್ಲಿ ಭಾಷಣ ಮಾಡಿದ್ದ ರಾಜು ಕಾಗೆ, ಲೀವರ್ ಟ್ರಾನ್ಸಫರಂಟ್ ಆದಾಗ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದೆ. ವೈದ್ಯರು ದಿನವೂ ಬಂದು ಹೇಗಿದ್ದೀರಿ ಎಂದು ಕೇಳೋರು. ಆಗ ಆಸ್ಪತ್ರೆಯಲ್ಲಿ ಇದ್ದ ಡಾಕ್ಟರ್‌ಗೆ ನಾನು ಹೇಳಿದ್ದೆ. ನನ್ನ ಆರೋಗ್ಯಕ್ಕೆ ಏನು ಆಗಿಲ್ಲರಿ. ನನ್ನ ಆಪರೇಷನ್ ಸಕ್ಸಸ್ ಮಾಡೀರಿ, ಎಲ್ಲಾ ಆಗೇತಿ. ಆದ್ರೆ ನಿಮ್ಮಲ್ಲಿ ನರ್ಸ್‌ಗಳು ಚೆಂದ ಚೆಂದ ಹುಡುಗಿಯರು ಇದ್ದಾರೆ. ಅವರು ನನಗೆ ಅಜ್ಜ ಅನ್ನುತ್ತಿದ್ದಾರೆ ಅದು ನನಗೆ ಮಾನಸಿಕ ಆಗಿದೆ ಎಂದಿದ್ದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿ ವಿವಾದಕ್ಕೀಡಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Mon, 23 October 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ