AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತಾಡುವಾಗ ನಾಲಗೆ ಮೇಲೆ ಸ್ವಾಧೀನ ಕಳೆದುಕೊಳ್ಳದಿದ್ದರೆ ರಾಜು ಕಾಗೆಗೆ ಕ್ಷಮಾಪಣೆ ಕೇಳುವ ಪ್ರಮೇಯ ಬರುತ್ತಿರಲಿಲ್ಲ!

ಮಾತಾಡುವಾಗ ನಾಲಗೆ ಮೇಲೆ ಸ್ವಾಧೀನ ಕಳೆದುಕೊಳ್ಳದಿದ್ದರೆ ರಾಜು ಕಾಗೆಗೆ ಕ್ಷಮಾಪಣೆ ಕೇಳುವ ಪ್ರಮೇಯ ಬರುತ್ತಿರಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 23, 2023 | 2:15 PM

ಮೊನ್ನೆ, ಬೆಳಗಾವಿಯ ಅಮರಖೋಡದಲ್ಲಿ ಆಯೋಜಿಸಲಾಗಿದ್ದ್ದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ಮಾತಾಡಿದ್ದ ಕಾಗೆ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೆಂದನೆಯ ನರ್ಸ್ ಗಳು ಬಂದು ಹೇಗಿದ್ದೀರಿ ಅಜ್ಜಾ? ಅಂತ ಕೇಳಿದಾಗ ಮಾನಸಿಕ ವೇದನೆಯಾಗುತಿತ್ತು ಅಂತ ಹೇಳಿ ರಸಿಕತೆಯನ್ನು ಪ್ರದರ್ಶಿಸಿದ್ದರು.

ಚಿಕ್ಕೋಡಿ: ವಯಸ್ಸಾಗುತ್ತಿದ್ದಂತೆ ಬಾಯಿ ಚಪಲ ಜಾಸ್ತಿ ಅಂತ ಕನ್ನಡದಲ್ಲಿ ಗಾದೆಮಾತಿದೆ, ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ (Raju Kage) ಬಿಡುಗಡೆ ಮಾಡಿರುವ ಕ್ಷಮಾಪಣೆಯ (apology) ವಿಡಿಯೋದಲ್ಲಿ ಅವರಾಡಿರುವ ಮಾತು ತನಗೆ ಮೇಲಿನ ಗಾದೆ ಸೂಕ್ತವಾಗಿ ಅನ್ವಯಿಸುತ್ತದೆ ಅಂತ ಹೇಳಿದ ಹಾಗಿದೆ. ಮೊನ್ನೆ, ಬೆಳಗಾವಿಯ ಅಮರಖೋಡದಲ್ಲಿ ಆಯೋಜಿಸಲಾಗಿದ್ದ್ದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ (Dasara Utsav) ಭಾಗವಹಿಸಿ ಮಾತಾಡಿದ್ದ ಕಾಗೆ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೆಂದನೆಯ ನರ್ಸ್ ಗಳು (beautiful nurses) ಬಂದು ಹೇಗಿದ್ದೀರಿ ಅಜ್ಜಾ? ಅಂತ ಕೇಳಿದಾಗ ಮಾನಸಿಕ ವೇದನೆಯಾಗುತಿತ್ತು ಅಂತ ಹೇಳಿ ರಸಿಕತೆಯನ್ನು ಪ್ರದರ್ಶಿಸಿದ್ದರು. ಕಾಗೆ ಆಡಿದ ಮಾತುಗಳು ವಿವಾದಕ್ಕೀಡಾಗಿ ಜನ ಅವರನ್ನು ತಿವ್ರವಾಗಿ ಟೀಕಿಸಿದ್ದರು. ಇದೇ ಹಿನ್ನೆಲೆಯಲ್ಲಿ ತಮ್ಮ ತಪ್ಪೊಪ್ಪಿಗೆ ವಿಡಿಯೋ ರಿಲೀಸ್ ಮಾಡಿರುವ ಕಾಗೆ, ಯಾರನ್ನೂ ನೋಯಿಸುವ ಉದ್ದೇಶದಿಂದ ಹಾಗೆ ಹೇಳಿಲ್ಲ, ನನಗೆ ವಯಸ್ಸಾಗಿರುವ ಬೇಸರಿಕೆಯನ್ನು ಹಾಗೆ ಹೇಳಿಕೊಂಡಿದ್ದೇನೆ, ಅಷ್ಟಾಗಿಯೂ ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಅಂತ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ