ದಸರಾ ಸಂಭ್ರಮ: ಪ್ರಯಾಣಿಕರ ಅನುಕೂಲಕ್ಕಾಗಿ ಈ 2 ದಿನ ಬೆಂಗಳೂರು-ಬೆಳಗಾವಿಗೆ ವಿಶೇಷ ರೈಲು ಸಂಚಾರ
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ ಸೇವೆ ಆರಂಭಿಸಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT)- ಬೆಳಗಾವಿ ನಿಲ್ದಾಣದ ನಡುವೆ ಅಕ್ಟೋಬರ್ 24 ಮತ್ತು 25ರಂದು ಮಾತ್ರ ಈ ವಿಶೇಷ ರೈಲು ಸಂಚರಿಸಲಿದೆ.
ಬೆಂಗಳೂರು, ಅ.23: ಇಡೀ ರಾಜ್ಯದಲ್ಲಿ ದಸರಾ (Dasara) ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಸಾಲು ಸಾಲು ರಜೆಗಳು ಸಿಕ್ಕಿರುವುದರಿಂದ ಜನರೆಲ್ಲಾ ತಮ್ಮ ತಮ್ಮ ಊರಿಗಳಿಗೆ ತೆರಳಲು ಹಾಗೂ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ನೈರುತ್ಯ ರೈಲ್ವೆಯು (South Western Railway) ಹೆಚ್ಚುವರಿ ರೈಲುಗಳನ್ನು ಬಿಟ್ಟಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ ಸೇವೆ ಆರಂಭಿಸಿದೆ.
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT)- ಬೆಳಗಾವಿ ನಿಲ್ದಾಣದ ನಡುವೆ ಮಂಗಳವಾರ (ಅಕ್ಟೋಬರ್ 24) ವಿಶೇಷ ರೈಲು ಸಂಚಾರ ಆರಂಭಿಸಲಿದೆ. ಈ ರೈಲು (ರೈಲು ಸಂಖ್ಯೆ 07307 ) ಅ.24ರಂದು ಬೆಳಗಾವಿ ನಿಲ್ದಾಣದಿಂದ ರಾತ್ರಿ 7.30ಕ್ಕೆ ಹೊರಟು ಅಕ್ಟೋಬರ್ 25ರಂದು ಬೆಳಗ್ಗೆ 6.55ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ತಲುಪುತ್ತದೆ. ಈ ರೈಲನ್ನು ಲೋಂಡಾ(ರಾತ್ರಿ 8.20/08.22), ಅಳ್ನಾವರ (ರಾತ್ರಿ 8.59/9), ಧಾರವಾಡ (ರಾತ್ರಿ 10/10.02), ಹುಬ್ಬಳ್ಳಿ (ರಾತ್ರಿ 10.45/10.55), ಹಾವೇರಿ (11.50/11.52), ಹರಿಹರ (ರಾತ್ರಿ 8.20/11.52), ದಾವಣಗೆರೆ (1.00/01.02am), ಕಡೂರು (2.30/2.32 am), ಅರಸೀಕೆರೆ (3.15/3.20am), ಮತ್ತು ತುಮಕೂರು (4.35/4.37am) ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ.
ರೈಲು ಸಂಖ್ಯೆ 07308 SMVT ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 25 ರಂದು ರಾತ್ರಿ 7.30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 7.10 ಕ್ಕೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸುತ್ತದೆ. ಈ ರೈಲನ್ನು ತುಮಕೂರು (ರಾತ್ರಿ 8.38/8.40), ಅರಸೀಕೆರೆ (ರಾತ್ರಿ 10.25/10.30), ಕಡೂರು (ರಾತ್ರಿ 10.58/11), ದಾವಣಗೆರೆ (12.35/12.37), ಹರಿಹರ (12.50/12.52), ಹಾವೇರಿ (1.44/01.46am), ಹುಬ್ಬಳ್ಳಿ (4.20/4.30am), ಧಾರವಾಡ (4.52/4.54am), ಅಳ್ನಾವರ (5.28/5.30am), ಮತ್ತು ಲೋಂಡಾ (5.58/6am) ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ವಿಸ್ಟಾಡೋಮ್ ರೈಲು ಸೇವೆಗಳಿಗೆ ಚಾಲನೆ ನೀಡಿದ ಜಮ್ಮು ಕಾಶ್ಮೀರದ ಎಲ್ಜಿ ಮನೋಜ್ ಸಿನ್ಹಾ
ಭಾರತೀಯ ರೈಲ್ವೆಯು ದುರ್ಗಾ ಪೂಜೆ, ದೀಪಾವಳಿ ಸಮಯದಲ್ಲಿ 283 ವಿಶೇಷ ರೈಲುಗಳನ್ನು ಹಾಕುವ ಮೂಲಕ ಹಬ್ಬದ ಸಮಯದಲ್ಲಿ ಎದುರಾಗುವ ದಟ್ಟಣೆಯನ್ನು ನಿವಾರಿಸಲು ತಯಾರಿ ನಡೆಸುತ್ತಿದೆ. ದಕ್ಷಿಣ ಮಧ್ಯ ರೈಲ್ವೆಯು 58 ರೈಲುಗಳನ್ನು ಓಡಿಸಲಿದೆ, ಪಶ್ಚಿಮ ರೈಲ್ವೆಯು 36 ರೈಲುಗಳನ್ನು ಮತ್ತು ವಾಯುವ್ಯ ರೈಲ್ವೆಯು 24 ರೈಲುಗಳನ್ನು ಓಡಿಸಲಿದೆ. ಹೆಚ್ಚುವರಿಯಾಗಿ, ಮುಂಬೈ ಮತ್ತು ದೆಹಲಿಯಿಂದ ದಟ್ಟಣೆಯನ್ನು ಕಡಿಮೆ ಮಾಡಲು ಛಾತ್‌ಗೆ ಮೊದಲು ನಾನ್-ಎಸಿ ವಂದೇ ರೈಲುಗಳನ್ನು ಪ್ರಾರಂಭಿಸಲಾಗುವುದು.
ಪಶ್ಚಿಮ ರೈಲ್ವೆಯು ಬಾಂದ್ರಾ ಟರ್ಮಿನಸ್ ಮತ್ತು ವೆರಾವಲ್ ನಿಲ್ದಾಣಗಳ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಪರಿಚಯಿಸಿದೆ. ಹೆಚ್ಚುವರಿಯಾಗಿ, ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಂಬೈ ಸೆಂಟ್ರಲ್ ಅಹಮದಾಬಾದ್, ಬಾಂದ್ರಾ ಟರ್ಮಿನಸ್ ಬಿಕಾನೆರ್, ಅಜ್ಮೀರ್-ಜೈಪುರ್ ಮತ್ತು ವಲ್ಸಾದ್ ಬಿಕಾನೇರ್ ನಡುವೆ ವಿಶೇಷ ಉತ್ಸವ ರೈಲುಗಳನ್ನು ಸಹ ಓಡಿಸಲಾಗುವುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ