Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ವಿಸ್ಟಾಡೋಮ್ ರೈಲು ಸೇವೆಗಳಿಗೆ ಚಾಲನೆ ನೀಡಿದ ಜಮ್ಮು ಕಾಶ್ಮೀರದ ಎಲ್​​​ಜಿ ಮನೋಜ್ ಸಿನ್ಹಾ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೇಂದ್ರಾಡಳಿತ ಪ್ರದೇಶ ಜನರನ್ನು ಅಭಿನಂದಿಸಿದರು. ಕಾಶ್ಮೀರ ಕಣಿವೆಯಲ್ಲಿ ವಿಸ್ಟಾಡೋಮ್ ರೈಲು ಸೇವೆಯನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಈಗ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಲಭ್ಯವಾಗುತ್ತಿವೆ ಎಂಬುದರ ಸಂಕೇತವಾಗಿದೆ ಇದು ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ವಿಸ್ಟಾಡೋಮ್ ರೈಲು ಸೇವೆಗಳಿಗೆ ಚಾಲನೆ ನೀಡಿದ ಜಮ್ಮು ಕಾಶ್ಮೀರದ ಎಲ್​​​ಜಿ ಮನೋಜ್ ಸಿನ್ಹಾ
ವಿಸ್ಟಾಡೋಮ್ ರೈಲು
Follow us
ರಶ್ಮಿ ಕಲ್ಲಕಟ್ಟ
|

Updated on: Oct 20, 2023 | 1:39 PM

ಶ್ರೀನಗರ ಅಕ್ಟೋಬರ್ 20: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಮತ್ತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಗುರುವಾರ ಕಾಶ್ಮೀರದಲ್ಲಿ ಬಹುನಿರೀಕ್ಷಿತ ವಿಸ್ಟಾಡೋಮ್ ರೈಲು (Vistadome train)ಸೇವೆಗೆ ಚಾಲನೆ ನೀಡಿದರು. ಕೇಂದ್ರ ಸಚಿವರು ಮತ್ತು ಅಸ್ಸಾಂ ಮತ್ತು ತ್ರಿಪುರಾ ಮುಖ್ಯಮಂತ್ರಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡರು. ನಂತರ, ಲೆಫ್ಟಿನೆಂಟ್ ಗವರ್ನರ್ ಶ್ರೀನಗರ ನಿಲ್ದಾಣದಿಂದ ಬನಿಹಾಲ್‌ಗೆ ಮೊದಲ ವಿಸ್ಟಾಡೋಮ್ ಕೋಚ್ ರೈಲಿಗೆ ಫ್ಲ್ಯಾಗ್‌ಆಫ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಸಚಿವರು, ಕಳೆದ ಒಂಬತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವು ಬಹಳಷ್ಟು ಬದಲಾಗಿದೆ. ಆ ಬದಲಾವಣೆ ಇಲ್ಲಿ ಗೋಚರಿಸುತ್ತದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯು ವೇಗವಾಗಿ ಸಾಗುತ್ತಿದೆ ಎಂದು ಅವರು ಹೇಳಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಜಿ 20 ಸಭೆಗಳು ನಡೆದಿವೆ. ರೈಲ್ವೆಯಲ್ಲಿಯೂ ಸಹ ಜಮ್ಮು ಕಾಶ್ಮೀರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಚೆನಾಬ್ ಸೇತುವೆ, ಅಂಜಿ ಸೇತುವೆಯ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ, ಕೆಲವು ಭಾಗಗಳನ್ನು ಹೊರತುಪಡಿಸಿ ಸುರಂಗಗಳು ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೇಂದ್ರಾಡಳಿತ ಪ್ರದೇಶ ಜನರನ್ನು ಅಭಿನಂದಿಸಿದರು. ಕಾಶ್ಮೀರ ಕಣಿವೆಯಲ್ಲಿ ವಿಸ್ಟಾಡೋಮ್ ರೈಲು ಸೇವೆಯನ್ನು ಪರಿಚಯಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಈಗ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಲಭ್ಯವಾಗುತ್ತಿವೆ ಎಂಬುದರ ಸಂಕೇತವಾಗಿದೆ ಇದು ಎಂದು ಹೇಳಿದ್ದಾರೆ.

ಜನರು ಮತ್ತು ಪ್ರವಾಸಿಗರ ಪ್ರಯಾಣದ ಅನುಭವವನ್ನು ಹೆಚ್ಚಿಸಿದ್ದಕ್ಕಾಗಿ ಅವರು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ವಿಸ್ಟಾಡೋಮ್ ಸೇವೆಗಳು ಪ್ರವಾಸೋದ್ಯಮದ ಮೇಲೆ ಗಂಭೀರ ಪ್ರಭಾವವನ್ನು ಬೀರುತ್ತವೆ ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಂಸ್ಕೃತಿಕ ಪುಷ್ಟೀಕರಣಕ್ಕೆ ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ: ಕುಮಾರಸ್ವಾಮಿ
ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರದ ಮುಂದೆ ಕೈ ಚಾಚಿರಲಿಲ್ಲ: ಕುಮಾರಸ್ವಾಮಿ
‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್
‘ಮಹಾಕುಂಭಮೇಳದಲ್ಲಿ ಭಾಗಿಯಾದ ನಾನು ಪುಣ್ಯವಂತೆ’: ನಟಿ ಕತ್ರಿನಾ ಕೈಫ್
ಪಕ್ಷದ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ: ಶಿವಲಿಂಗೇಗೌಡ
ಪಕ್ಷದ ಹೈಕಮಾಂಡ್ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ: ಶಿವಲಿಂಗೇಗೌಡ
ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ!
ಸರ್ಕಾರಿ ಶಾಲೆಯ ದಲಿತ ವಿದ್ಯಾರ್ಥಿಗಳ ತಟ್ಟೆ ಶುಚಿಗೆ ಅಡುಗೆ ಸಿಬ್ಬಂದಿ ನಕಾರ!
ಪಕ್ಷದ ಯಾವ ವಿಷಯವನ್ನೂ ಸಾರ್ವಜನಿಕವಾಗಿ ಮಾತಾಡಲ್ಲ: ಪರಮೇಶ್ವರ್
ಪಕ್ಷದ ಯಾವ ವಿಷಯವನ್ನೂ ಸಾರ್ವಜನಿಕವಾಗಿ ಮಾತಾಡಲ್ಲ: ಪರಮೇಶ್ವರ್
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು
ಅನುದಾನ ಸಿಗದಿರುವುದೂ ಸುರೇಶ್ ಗೌಡರ ಕೋಪಕ್ಕೆ ಒಂದು ಕಾರಣವೇ?
ಅನುದಾನ ಸಿಗದಿರುವುದೂ ಸುರೇಶ್ ಗೌಡರ ಕೋಪಕ್ಕೆ ಒಂದು ಕಾರಣವೇ?
ಪಾಕ್ ಸೋಲಿನ ಬಗ್ಗೆ ಕೇಳಿದಾಗ, ದುಃಖದಲ್ಲಿ ಹಾಡೇಳಿದ ಮಾಜಿ ಆಟಗಾರರು..!
ಪಾಕ್ ಸೋಲಿನ ಬಗ್ಗೆ ಕೇಳಿದಾಗ, ದುಃಖದಲ್ಲಿ ಹಾಡೇಳಿದ ಮಾಜಿ ಆಟಗಾರರು..!
ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ ಶಿವರಾಜ್​ಕುಮಾರ್-ಗೀತಾ
ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ ಶಿವರಾಜ್​ಕುಮಾರ್-ಗೀತಾ
ಪ್ರತಾಪ್ ಸಿಂಹ ಯಾರ ಬಣದಲ್ಲಿದ್ದಾರೆಂದು ಊಹಿಸುವುದು ಕಷ್ಟ!
ಪ್ರತಾಪ್ ಸಿಂಹ ಯಾರ ಬಣದಲ್ಲಿದ್ದಾರೆಂದು ಊಹಿಸುವುದು ಕಷ್ಟ!