ಬರಿಗಾಲಲ್ಲಿ ಚಾಮುಂಡಿ ಬೆಟ್ಟದ 1001 ಮೆಟ್ಟಿಲು ಏರಿದ ಶೋಭಾ ಕರಂದ್ಲಾಜೆ
ಬರಿಗಾಲಲ್ಲಿ ಚಾಮುಂಡಿ ಬೆಟ್ಟದ 1001 ಮೆಟ್ಟಿಲು ಏರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಾಡಿನ ಅಧಿದೇವತೆಯ ದರ್ಶನ ಪಡೆದಿದ್ದಾರೆ. ಬುಧವಾರ (ಅಕ್ಟೋಬರ್ 1) ಬೆಳಗ್ಗೆ ಮಾವುತರು ಮತ್ತು ಕಾವಾಡಿಗರ ಜೊತೆ ಉಪಾಹಾರ ಸೇವಿಸುವೆ ಎಂಬುದಾಗಿ ಅವರು ಇದೇ ವೇಳೆ ಮಾಹಿತಿ ನೀಡಿದ್ರು.
ಮೈಸೂರು, ಸೆಪ್ಟೆಂಬರ್ 30: ಪ್ರತಿ ವರ್ಷದಂತೆ ಚಾಮುಂಡಿಬೆಟ್ಟದ 1001 ಮೆಟ್ಟಿಲುಗಳನ್ನ ಏರಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karndlaje), ದೇವಿಯ ದರ್ಶನ ಪಡೆದಿದ್ದಾರೆ. ನಾಡಿನ ಜನತೆಗೆ ಒಳ್ಳೆಯದಾಗಲಿ, ಮೋದಿ ಕೈಬಲಗೊಳ್ಳಲಿ ಎಂದು ನಾಡಿನ ಅಧಿದೇವತೆ ಚಾಮುಂಡೇಶ್ವರಿಯಲ್ಲಿ ಶೋಭಾ ಕರಂದ್ಲಾಜೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಬುಧವಾರ (ಅಕ್ಟೋಬರ್ 1) ಬೆಳಗ್ಗೆ ಮಾವುತರು, ಕಾವಾಡಿಗರ ಜೊತೆ ಉಪಾಹಾರ ಸೇವಿಸುವೆ ಎಂಬುದಾಗಿ ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
